36.7 C
ಪುತ್ತೂರು, ಬೆಳ್ತಂಗಡಿ
March 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಬಗ್ಗೆ ಸಮಾಲೋಚನಾ ಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 28 ರಂದು ಸಮರ್ಪಣೆ ಯಾಗಲಿರುವ ಹೊರೆ ಕಾಣಿಕೆಯ ಬಗ್ಗೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯನ್ನು ಫೆ.26 ರಂದು ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇಲ್ಲಿ ನಡೆಸಲಾಯಿತು.

ಸಮಾಲೋಚನಾ ಸಭೆಯಲ್ಲಿ ಫೆ. 28 ರ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಹೊರ ಕಾಣಿಕೆಯನ್ನು ಬೆಳ್ತಂಗಡಿ ತಾಲೂಕಿನ ಏಳು ಜಿಲ್ಲಾ ಪಂಚಾಯತ್ ಹಾಗೂ ಬೆಳ್ತಂಗಡಿ ನಗರ ವ್ಯಾಪ್ತಿಯಿಂದ ಹೊರ ಕಾಣಿಕೆಯನ್ನು ಸಮರ್ಪಿಸುವ ಬಗ್ಗೆ ಚರ್ಚಿಸಲಾಯಿತು. ಪ್ರತಿ ಕ್ಷೇತ್ರದಿಂದ ಎರಡು ವಾಹನದಲ್ಲಿ ಹೊರೆ ಕಾಣಿಕೆಯೊಂದಿಗೆ ಹೊರಟು ಪುತ್ತೂರಿನಲ್ಲಿ ಒಂದು ಗಂಟೆಗೆ ಸೇರಿ ಅಲ್ಲಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭವ್ಯ ಮೆರವಣಿಗೆಯೊಂದಿಗೆ ತೆರಳುವುದೆಂದು ನಿರ್ಧರಿಸಲಾಯಿತು.


ಸಮಾಲೋಚನಾ ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ನಿಕಟಪೂರ್ವ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಬಿ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು.


ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯಂತ ಕೋಟ್ಯಾನ್ ಮರೋಡಿ, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷರಾಗಿರುವ ಜಯರಾಮ ಬಂಗೇರ ಹೆರಾಜೆ, ಬೆಳ್ತಂಗಡಿ ನಗರ ಸಂಚಾಲಕ ಕರುಣಾಕರ, ಲಾಯಿಲ ವಲಯ ಸಂಚಾಲಕಿ ಸೌಮ್ಯ, ಕುವೆಟ್ಟು ವಲಯ ಸಂಚಾಲಕಿ ಶಾಂತ ಕುವೆಟ್ಟು, ಪ್ರಮೋದ್ ಮಚ್ಚಿನ, ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ಮಾಜಿ ಸದಸ್ಯ ಮಂಜುನಾಥ್ ಸಾಲಿಯನ್ ,ಕಣಿಯೂರು ವಲಯ ಸಂಚಾಲಕ ಉಷಾ ಶರತ್, ಅಳದಂಗಡಿ ವಲಯ ಸಂಚಾಲಕ ಮಧುರ ರಾಘವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರ್ಲಾಲು ಇದರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ನಾರಾವಿ ವಲಯ ಸಂಚಾಲಕ ಯಶೋಧರ ಮರೋಡಿ, ಸುಲ್ಕೇರಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಶುಭಕರ ಕುದ್ಯಾಡಿ, ಮಾಲಾಡಿ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ದಿನೇಶ್ ಡಿ ಕರ್ಕೇರ, ಗುರುನಾರಾಯಣ ಸೇವಾ ಸಂಘ ಮಡಂತ್ಯಾರ್ ಇಲ್ಲಿನ ಅಧ್ಯಕ್ಷ ವೆಂಕಪ್ಪ ಕೋಡ್ಲಕ್ಕೆ, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕ ಹರಿದಾಸ್ ಕೇದೆ ಮುಂತಾದವರು ಭಾಗವಹಿಸಿದ್ದರು.


ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಕಾರ್ಯಕ್ರಮವನ್ನು ಸಂಘಟಿಸಿ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಅಳದಂಗಡಿ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಧನ್ಯವಾದವಿತ್ತರು.

Related posts

ದಯಾ ಶಾಲಾ ವಾರ್ಷಿಕೋತ್ಸವ

Suddi Udaya

ಕಳೆಂಜ: ಮಿಯಾರು ಪಾದೆ ಮೀಸಲು ರಕ್ಷಿತಾ ಅರಣ್ಯದಲ್ಲಿ ಹಣ್ಣಿನ ಗಿಡ ನೇಡುವ ಕಾರ್ಯಕ್ರಮ

Suddi Udaya

ಮಡಂತ್ಯಾರು: ರಬ್ಬರ್ ಮರ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ‌

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜು.8: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರಿಗೆ ದೃಢಕಲಶಾಭಿಷೇಕ

Suddi Udaya

ಪೆಟ್ರೋಲ್ ದರ ಏರಿಸುವ ಮೂಲಕ ರಾಜ್ಯಸರಕಾರದ ಬಣ್ಣ ಬಯಲಾಗಿದೆ : ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

Suddi Udaya
error: Content is protected !!