
ಅಂಡಿಂಜೆ :ಇಲ್ಲಿಯ ಕಲ್ಲತ್ತಿ ಪ್ರದೇಶದ ಅರಣ್ಯ ಇಲಾಖೆಯ ಗೇರು ಗಿಡಗಳಿಗೆ ಫೆ.24 ರಂದು ಆಕಸ್ಮಿಕವಾಗಿ ಬಿದ್ದ ಬೆಂಕಿ ಸುಮಾರು 20 ಎಕರೆ ಪ್ರದೇಶಕ್ಕೆ ಹರಡಿ ಕೃಷಿಕರ ರಬ್ಬರ್ ತೋಟಕ್ಕೆ ಬೆಂಕಿ ಹರಡಿತ್ತು. ಅಗ್ನಿಶಾಮಕದಳದ ಸತತ ಪ್ರಯತ್ನ ಹಾಗೂ ಗ್ರಾಮಸ್ಥರು ಹಗಲು ರಾತ್ರಿ ಬೆಂಕಿ ನಂದಿಸಿದ ಕಾರಣ ಒಂದು ಹತೋಟಿಗೆ ಬಂದಿದೆ.


ಅರಣ್ಯ ಇಲಾಖೆಯ ಸುಮಾರು 10 ಎಕರೆ ಗೇರು ಗಿಡ ಹಾಗೂ ಕೃಷಿಕರ 500 ರಷ್ಟು ರಬ್ಬರ್ ಗಿಡ ಬೆಂಕಿಗಾಹುತಿಯಾಗಿದೆ.

ಬೆಂಕಿ ನಂದಿಸುವಲ್ಲಿ ಅಂಡಿಂಜೆ ಗ್ರಾಮ ಪಂಚಾಯತಿನ ಅಧ್ಯಕ್ಷ ನಿತಿನ್ ಮುಂಡೇವು, ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ್ ಹೆಗ್ಡೆ, ನಿರ್ದೇಶಕರಾದ ಸಂತೋಷ ಜೈನ್, ಸ್ಥಳೀಯ ಗ್ರಾಮಸ್ಥರು ಮತ್ತು ಮಿತ್ರವೃಂದ ಕಿಲಾರದ ಅಧ್ಯಕ್ಷ ಸಚಿನ್ ಮರೋಳಿ ಹಾಗೂ ಸದಸ್ಯರು ಸಹಕರಿಸಿದರು.