ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.27ರಂದು ನಡೆದ ಚುನಾವಣೆಯಲ್ಲಿ ತಡೆ ಹಿಡಿಯಲಾದ ಫಲಿತಾಂಶದ ಬಗ್ಗೆ ಹೈಕೋರ್ಟುನ ಅಂತಿಮ ತೀರ್ಪು ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಬೆಂಗಳೂರು ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್‌ಪಿಟಿಷನ್ ನ್ಯಾಯಾಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಮುಂದಿನ ಆದೇಶವನ್ನು ಕಾಯ್ದಿರಿಸಿತ್ತು. ನ್ಯಾಯಾಯಲದ ಆದೇಶದಂತೆ ಮತದಾನಕ್ಕೆ ಅನುಮತಿ ಪಡೆದಿರುವ ಸದಸ್ಯರು ಮತ ಚಲಾಯಿಸಿದ್ದು ಆ ಮತಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ, ಅಭ್ಯರ್ಥಿ, ಏಜಂಟರ ಸಮ್ಮುಖದಲ್ಲಿ ಎಣಿಕೆಯನ್ನು ಮಾಡಲಾಗಿದೆ. ಇದೀಗ ಹೈಕೋರ್ಟು ನೀಡಿದ ಆದೇಶ ಬಂದ ಕೂಡಲೇ ಚುನಾವಣಾಧಿಕಾರಿ ಎನ್.ಜೆ. ಗೋಪಾಲ್ ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ.
ಚುನಾಯಿತರಾದ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾದ ಪಿ. ಕುಶಾಲಪ್ಪ ಗೌಡ, ವಿಠಲ ಬಂಡಾರಿ, ಶ್ರೀನಾಥ ಬಿ., ಪದ್ಮನಾಭ ಕೆ., ಉದಯ ಎ., ಮಹಾಬಲ ಶೆಟ್ಟಿ, ಸುನಿಲ್, ರವಿಚಂದ್ರ ಪಿ., ಶ್ರೀಮತಿ ಪ್ರೇಮಾವತಿ, ಶ್ರೀಮತಿ ಅಶ್ವಿನಿ, ವಿಶ್ವನಾಥ, ಮುತ್ತಪ್ಪ ಜಯ ಗಳಿಸಿದ್ದಾರೆ.