ತೆಕ್ಕಾರು: ಇಲ್ಲಿಯ ಬಾಜಾರು ರಮೇಶ್ ನಾಯ್ಕರ ಮನೆ ಬಳಿ ಟಿಸಿ ಓವರ್ ಲೋಡ್ ನಿಂದಾಗಿ ಬೆಂಕಿ ಹತ್ತಿ ಪಕ್ಕದಲ್ಲಿ ಇದ್ದ ಗುಡ್ಡಕ್ಕೆ ಬೆಂಕಿ ತಾಗಿದ ಘಟನೆ ನಡೆದಿದೆ.
ಕಳೆದ 2 ವರ್ಷಗಳಿಂದ ಪ್ರತ್ಯೇಕ ಟಿಸಿ ವ್ಯವಸ್ಥೆ ಮಾಡಿಸುವಂತೆ ಸ್ಥಳೀಯರು ದೂರು ನೀಡಿದರು ಇದುವರೆಗೂ ಪ್ರಯೋಜನವಾಗಿಲ್ಲ. ಟಿಸಿ ಯ ಓವರ್ ಲೋಡ್ ನಿಂದಾಗಿ ಪಕ್ಕದಲ್ಲೆ ಇದ್ದ ಗೇರು ಮರಗಳು ಬೆಂಕಿಗಾಹುತಿಯಾಗಿದೆ. ಶೀಘ್ರದಲ್ಲೆ ಟಿಸಿ ಸಮಸ್ಯೆಯನ್ನು ಸರಿಪಡಿಸದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿ ಎ ಬ್ಯಾಂಕ್ ನಿರ್ದೇಶಕರಾದ ಅಬ್ದುಲ್ ರಝಾಕ್, ಅಬ್ದುಲ್ ರಹಿಮಾನ್, ರವಿ, ಅಬ್ದುಲ್ ಮುನೀರ್, ಗ್ರಾ.ಪಂ. ಅಧ್ಯಕ್ಷೆ ರಹಿಯಾನತ್, ಸ್ಥಳೀಯ ನಿವಾಸಿಗಳಾದ ಸುರೇಶ್ ಪೂಜಾರಿ, ಸುಲೈಮಾನ್, ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದರು.