ಶಿಶಿಲ : ಶಿಶಿಲ ಶ್ರೀ ಶಿಶಿಲೇಶ್ವರ ಸ್ವಾಮಿಯ ಶಿವರಾತ್ರಿ ಉತ್ಸವ ಅತ್ಯಂತ ವೈಭವದಿಂದ ಫೆ.26 ರಂದು ಜರಗಿತು.

ಈ ವೇಳೆ ಶ್ರೀ ದೇವರಿಗೆ ರೂ 1.50 ಲಕ್ಷ ವೆಚ್ಚದಲ್ಲಿ 7 ಬೆಳ್ಳಿಯ ಕಲಶವನ್ನು ಶಿಶಿಲ ದೇವಳದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀನಿವಾಸ ಮೂಡೆತ್ತಾಯ ಮತ್ತು ಮನೆಯವರು ಕೆಮ್ಮಿಂಜೆ ನಾಗೇಶ ತಂತ್ರಿಗಳಿಗೆ ಮೂಲಕ ದೇವರಿಗೆ ಸಮರ್ಪಿಸಿದರು.


ಈ ಸಂದರ್ಭದಲ್ಲಿ ಜಯರಾಮ ನೆಲ್ಲಿತ್ತಾಯ, ರಾಧಾಕೃಷ್ಣ ಭಟ್, ಆನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
