ಶಿಶಿಲ: ಶಿಶಿಲ ಗ್ರಾಮ ಮಟ್ಟದ ಸೃಷ್ಟಿ ಸಂಜೀವಿನಿ ಒಕ್ಕೂಟದ 2023-2024ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಫೆ.25 ರಂದು ಒಕ್ಕೂಟ ಅಧ್ಯಕ್ಷೆ ಗಿರಿಜಾ. ಎಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಿನ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ವ್ಯವಸ್ಥಾಪಕ ನಿತೇಶ್ ರವರು ಎನ್ ಆರ್ ಎಲ್ ಎಂ ಯೋಜನೆ ಕುರಿತು ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ವೀಣಾಶ್ರೀ ಭಂಡಾರಿಉಪಸ್ಥಿತರಿದ್ದರು.
ಸದಸ್ಯರು ತಯಾರಿಸಿದ ಉತ್ಪನ್ನಗಳಾದ ಉಪ್ಪಿನಕಾಯಿ ಮತ್ತು ಸೋಪ್ ಗಳನ್ನು ಬಿಡುಗಡೆ ಮಾಡಲಾಯಿತು. ಸ್ವ ಉದ್ಯೋಗ ಮಾಡುತ್ತಿರುವ ಸದಸ್ಯೆಯರನ್ನು ಸನ್ಮಾನಿಸಲಾಯಿತು. ಬಳಿಕ ಒಕ್ಕೂಟದ ಪದಗ್ರಹಣ ನಡೆಯಿತು. ಎಂ.ಬಿಕೆ ಶಾರದಾ ವರದಿ ವಾಚಿಸಿದರು.