ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ.27 ರಂದು ಗ್ರಾ.ಪಂ. ಅಧ್ಯಕ್ಷ ಪುನೀತ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಲೋಕೇಶ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು.

ಮೆಸ್ಕಾಂ ಇಲಾಖೆಯ ಜೆಇ ಸಭೆಗೆ ಬರಬೇಕು. ಅವರ ಬದಲಿಗೆ ಇನ್ನೋಬ್ಬರನ್ನು ಕಳುಹಿಸಿದರೆ ಆಗುವುದಿಲ್ಲ. ನಾವು ಕಳೆದ ಬಾರಿ ತಿಳಿಸಿ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಹೇಳಿದ್ದರು ಆದರೆ ಇಂದಿನವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಜೆಇ ಸಭೆಗೆ ಹಾಜರಾಗುವಂತೆ ಗ್ರಾಮಸ್ಥರು ಆಗ್ರಹಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ ಸದಸ್ಯರುಗಳಾದ ಸುಸ್ಸಾನ ಡಿಸೋಜಾ, ದಿನೇಶ್ ಕರ್ಕೇರಾ, ಎಸ್. ಬೇಬಿ ಸುವರ್ಣಾ, ಸುಧಾಕರ ಆಳ್ವ, ಜಯಂತಿ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ತುಳಸಿ ಬಿ., ರಾಜೇಶ್, ಐರಿನ್ ಮೊರಾಸ್, ಫಾರ್ಝನ, ವಿದ್ಯಾ ಪಿ. ಸಾಲಿಯಾನ್, ರುಬೀನಾ, ಗುಲಾಬಿ, ದಿನೇಶ್, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಓ ರಾಜ್ ಶೇಖರ್ ರೈ ಸ್ವಾಗತಿಸಿ , ಕಾರ್ಯದರ್ಶಿ ಯಶೋಧರ ವಂದಿಸಿದರು.