23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾವ್ಯ: ಮರದಿಂದ ಬಿದ್ದ ವ್ಯಕ್ತಿ; ಚಿಕಿತ್ಸೆ ಫಲಕಾರಿಯಾಗದೆ ಸಾವು

ಸಾವ್ಯ: ಶೇಂದಿ ತೆಗೆಯುತ್ತಿರುವ ಸಮಯ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಫೆ.26ರಂದು ನಡೆದಿದೆ.

ಘಟನೆಯ ವಿವರ: ಸಾವ್ಯ ಗ್ರಾಮದ ಕಡಪೊಟ್ಟು ನಿವಾಸಿ ನವೀನ ರವರ ದೂರಿನಂತೆ ಫೆ.26 ರಂದು ಮಧ್ಯಾಹ್ನ ಮುತ್ತಯ್ಯ ಪೂಜಾರಿ(70ವ) ಎಂಬವರು ಸಾವ್ಯ ಗ್ರಾಮದ ಮರ್ಲೋಟ್ಟು ಎಂಬಲ್ಲಿರುವ ಸಂತೋಷ್ ಆಚಾರ್ಯ ರವರ ಜಾಗದಲ್ಲಿರುವ ತಾಳೆ ಮರಕ್ಕೆ ಹತ್ತಿ ಶೇಂದಿ ತೆಗೆಯುತ್ತಿರುವ ಸಮಯ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಿರಸಿಯ ನಾರಾಯಣ ಆರ್ ಕೋಮಾರ್ ರವರಿಂದ ಸೇವಾಧಾಮಕ್ಕೆ ಧನ ಸಹಾಯ

Suddi Udaya

ಪ್ರತಿಭಾ ಕಾರಂಜಿ ಮಿಮಿಕ್ರಿ ಸ್ಪರ್ಧೆ: ಮಚ್ಚಿನ ಸ.ಪ್ರೌ. ಶಾಲೆಯ ವಿದ್ಯಾರ್ಥಿ ಮನೀಷ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ. ಪ್ರಾ. ಶಾಲೆಗೆ ಗಡಿಯಾರ ಕೊಡುಗೆ

Suddi Udaya

ಸುಲ್ಕೇರಿಮೊಗ್ರು: ಮನೆ ಹಾಗೂ ಕೊಟ್ಟಿಗೆಗೆ ಮರ ಬಿದ್ದು ಹಾನಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಕಾರ್ಯಗಳಿಗೆ ರಾಜ್ಯಾದ್ಯಂತ ಮೆಚ್ಚುಗೆ: ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಭಾವಚಿತ್ರ ಪೇಂಟಿಂಗ್ ನಲ್ಲಿ ತಯಾರಿಸಿ ಬಳ್ಳಾರಿಯ ಅಭಿಮಾನಿಯಿಂದ ಹಸ್ತಾಂತರ

Suddi Udaya
error: Content is protected !!