ತೆಕ್ಕಾರು: ಸರ್ವದಾನಿಗಳಿಂದ ಮತ್ತು ಊರವರ ಸಹಕಾರದಿಂದ ಸರಳಿಕಟ್ಟೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರವು 25 ದಿನದೊಳಗೆ ಪೂರ್ಣಗೊಂಡು ಫೆ.27ರಂದು ಉದ್ಘಾಟನೆಗೊಂಡಿತು.

ಸುಮಾರು ರೂ.1 ಲಕ್ಷ ವೆಚ್ಚದಲ್ಲಿ ಉದಾರ ದಾನಿಗಳಿಂದ ಈ ಪ್ರವೇಶ ದ್ವಾರದ ಕಾರ್ಯವು ನೆರವೇರಿತು. ಅತ್ಯಂತ ಸುಂದರವಾದ ಮತ್ತು ಮಕ್ಕಳಿಗೆ ಸ್ವಾಗತಿಸುವ ದ್ವಾರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ದಾನಿಗಳಿಂದ ಸಂಗ್ರಹವಾದ ಹಣವನ್ನು ಒಟ್ಟುಗೂಡಿಸಿ ಕೆಲಸವನ್ನು ನಿರ್ವಹಿಸಿದ ಹೈದರ್ ರವರಿಗೆ, ಶಾಲಾ ಶಿಕ್ಷಕರಿಗೆ, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ, ಶಾಲಾ ಪೋಷಕ ವೃಂದಕ್ಕೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ ಸಹಕಾರ ನೀಡಿದ ದಾನಿಗಳಿಗೆ, ಮಕ್ಕಳಿಗೆ ಶಿಕ್ಷಕ ವೃಂದ ಕೃತಜ್ಞತೆ ಸಲ್ಲಿಸಿದೆ.