23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾಲಾಡಿ ಗ್ರಾ.ಪಂ. ಗ್ರಾಮ ಸಭೆ

ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್‌ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ.27 ರಂದು ಗ್ರಾ.ಪಂ. ಅಧ್ಯಕ್ಷ ಪುನೀತ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು‌. ಸಾಮಾಜಿಕ ವಲಯ ಅರಣ್ಯಾಧಿಕಾರಿ ಲೋಕೇಶ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು.

ಮೆಸ್ಕಾಂ ಇಲಾಖೆಯ ಜೆಇ ಸಭೆಗೆ ಬರಬೇಕು. ಅವರ ಬದಲಿಗೆ ಇನ್ನೋಬ್ಬರನ್ನು ಕಳುಹಿಸಿದರೆ ಆಗುವುದಿಲ್ಲ. ನಾವು ಕಳೆದ ಬಾರಿ ತಿಳಿಸಿ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಹೇಳಿದ್ದರು ಆದರೆ ಇಂದಿನ‌ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಜೆಇ ಸಭೆಗೆ ಹಾಜರಾಗುವಂತೆ ಗ್ರಾಮಸ್ಥರು ಆಗ್ರಹಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ ಸದಸ್ಯರುಗಳಾದ ಸುಸ್ಸಾನ ಡಿಸೋಜಾ, ದಿನೇಶ್‌ ಕರ್ಕೇರಾ, ಎಸ್. ಬೇಬಿ ಸುವರ್ಣಾ, ಸುಧಾಕರ ಆಳ್ವ, ಜಯಂತಿ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ತುಳಸಿ ಬಿ., ರಾಜೇಶ್, ಐರಿನ್ ಮೊರಾಸ್, ಫಾರ್ಝನ, ವಿದ್ಯಾ ಪಿ. ಸಾಲಿಯಾನ್, ರುಬೀನಾ, ಗುಲಾಬಿ, ದಿನೇಶ್, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


ಪಿಡಿಓ ರಾಜ್ ಶೇಖರ್ ರೈ ಸ್ವಾಗತಿಸಿ , ಕಾರ್ಯದರ್ಶಿ ಯಶೋಧರ ವಂದಿಸಿದರು.

Related posts

ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

Suddi Udaya

ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನೋಂದಣಿ ಕಛೇರಿ ಉದ್ಘಾಟನೆ

Suddi Udaya

ಸಿಯೋನ್ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಜ.4-5: ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಆಪರೇಷನ್ ಸಿಂಧೂರ: ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಪ್ರಾಥ೯ನೆ

Suddi Udaya

ಸುರ್ಯ ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ಆಟಿಡೊಂಜಿ ದಿನ ಮತ್ತು ಸಾರ್ವಜನಿಕ ಕ್ರೀಡಾಕೂಟ

Suddi Udaya
error: Content is protected !!