ಸಾವ್ಯ: ಶೇಂದಿ ತೆಗೆಯುತ್ತಿರುವ ಸಮಯ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಫೆ.26ರಂದು ನಡೆದಿದೆ.
ಘಟನೆಯ ವಿವರ: ಸಾವ್ಯ ಗ್ರಾಮದ ಕಡಪೊಟ್ಟು ನಿವಾಸಿ ನವೀನ ರವರ ದೂರಿನಂತೆ ಫೆ.26 ರಂದು ಮಧ್ಯಾಹ್ನ ಮುತ್ತಯ್ಯ ಪೂಜಾರಿ(70ವ) ಎಂಬವರು ಸಾವ್ಯ ಗ್ರಾಮದ ಮರ್ಲೋಟ್ಟು ಎಂಬಲ್ಲಿರುವ ಸಂತೋಷ್ ಆಚಾರ್ಯ ರವರ ಜಾಗದಲ್ಲಿರುವ ತಾಳೆ ಮರಕ್ಕೆ ಹತ್ತಿ ಶೇಂದಿ ತೆಗೆಯುತ್ತಿರುವ ಸಮಯ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.