ಬೆಳ್ತಂಗಡಿ:ಅಳದಂಗಡಿ ಬೆಟ್ಟದ ಬಸದಿ ಭಗವಾನ್ ಶ್ರೀ ಬ್ರಹ್ಮದೇವರ ಬಸದಿಯ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ರೂ.50 ಲಕ್ಷ ಅನುದಾನ ಮಂಜೂರುಗೊಳಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರನ್ನು ಬೆಟ್ಟದ ಬಸದಿ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಚಂದ್ರರಾಜ್ ಪೂವಣಿ, ಅಧ್ಯಕ್ಷರು ಪ್ರಮೋದ್ ಕುಮಾರ್ ಜೈನ್, ಕಾರ್ಯದರ್ಶಿ ಪ್ರವೀಣ್ ಕುಮಾರ್ ಜೈನ್ ಪಿಲ್ಯ, ಉದ್ಯಮಿ ಶೀತಲ್ ಜೈನ್ ಶಿರ್ಲಾಲು, ಕೆಡಿಪಿ ಸದಸ್ಯ ಸುನೀಲ್ ಕುಮಾರ್ ಜೈನ್ ಶಿರ್ಲಾಲು, ನಾಗಕುಮಾರ್ ಜೈನ್, ಸುಕೇಶ್ ಕುಮಾರ್ ಜೈನ್, ಗುಣಮ್ಮ ಜೈನ್, ಜಗತ್ಪಾಲ ಕಡಂಬು, ಪ್ರಕಾಶ್ ಕುಮಾರ್ ಜೈನ್, ಪ್ರಕಾಶ್ ಜೈನ್ ಡೇವುಣಿ, ಪ್ರಮೋದ್ ಕುಮಾರ್ ಜೈನ್, ಸಂತೋಷ್ ಕುಮಾರ್ ಜೈನ್ ಸಿದ್ದರಹಿತ್ಲು, ಅರ್ಕಕೀರ್ತಿ ಹೆಗ್ಡೆ ಕಟ್ಟೆ,ಪಾರ್ಶ್ವನಾಥ ಜೈನ್,ಪದ್ಮ ಬಳಂಜ ಹಾಗೂ ಸಮಸ್ತ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.