
ಬೆಳ್ತಂಗಡಿ: ಫೆ.26ರಂದು ಸಂಪನ್ನಗೊಂಡ ಮಹಾ ಕುಂಭಮೇಳ,. ಅಯೋದ್ಯೆ, ಕಾಶಿ , ಈ ಮೂರು ಪುಣ್ಯ ಕ್ಷೆತ್ರಕ್ಕೆ ಬೆಳ್ತಂಗಡಿಯ ಮಹೇಶ್ ಆಚಾರ್ಯ ಎಂಬವರು 5 ತಿಂಗಳ ಮಗು ಜೊತೆ ಮಗಳು ಪ್ರಿಯಾ ಆಚಾರ್ಯ 5 ವರ್ಷ, ತಾಯಿ ರೇವತಿ ಆಚಾರ್ಯ, ತಂದೆ ವಿಘ್ನೇಶ್ ಆಚಾರ್ಯ ಕರೆದುಕೊಂಡು ಹೋಗಿ ಪುಣ್ಯ ಸ್ನಾನ ಹಾಗೂ ಪುಣ್ಯ ಕ್ಷೇತ್ರಗಳ ದಶ೯ನ ಮಾಡಿದರು.
ಮಹೇಶ್ ಆಚಾರ್ಯ ಅವರು ತನ್ನ ತಂದೆ, ತಾಯಿ, ಜೊತೆಯಲ್ಲಿ ಕುಟುಂಬ ಸಮೇತ ಮಹಾ ಕುಂಭಮೇಳಕ್ಕೆ ಹೋಗಿ ಬಂದಿರುವುದು ಎಲ್ಲರಿಗೂ ಆದಶ೯ವಾಗಿದೆ.
ಉತ್ತರ ಪ್ರದೇಶದ ಪೊಲೀಸರು ಇವರ ಆದಶ೯ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2500 ಕಿ.ಮೀ ದೂರದಿಂದ ತನ್ನ ತಂದೆ, ತಾಯಿ ಕುಟುಂಬ, ಪುಟ್ಟ ಮಗು ಸಹಿತ ಬಂದಿರುವ , ಮಹೇಶ್ ಆಚಾರ್ಯ ಅವರ ಕಾಯ೯ಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.