24 C
ಪುತ್ತೂರು, ಬೆಳ್ತಂಗಡಿ
February 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ಧೃಡ ಕಲಶ ಹಾಗೂ ಅಭಿನಂದನಾ ಸಮಾರಂಭ

ಬೆಳ್ತಂಗಡಿ: ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ‌ ಜ. 8 ರಿಂದ 12 ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಅರುವ ಬ್ರಹ್ಮಕಲಶೋತ್ಸವವೆಂದೇ ಜಿಲ್ಲಾದ್ಯಂತ ಪ್ರಸಿದ್ದಿ ಪಡೆದಿರುವುದಲ್ಲದೆ ಮಾದರಿಯೂ ಆಗಿರುವುದು ಸಂತಸ ತಂದಿದೆ. ಇದಕ್ಕೆಲ್ಲಾ ಅಜಿಲ ಸೀಮೆಯ ಭಕ್ತರು ಕಾರಣ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಅಳದಂಗಡಿ ಅರಮನೆ ಡಾl ಪದ್ಮಪ್ರಸಾದ ಅಜಿಲರು ಶ್ಲಾಘಿಸಿದರು.

ಅವರು ಫೆ.28 ರಂದು ದೇವಿ ಸನ್ನಿಧಿಯಲ್ಲಿ ನಡೆದ ಧೃಡ ಕಲಶ ಸಂದರ್ಭ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.


ಅಲ್ಪ ಸಮಯದ ಅವಧಿಯಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆದಿರುವುದಕ್ಕೆ ಸ್ಥಳೀಯ ಸಂಘ ಸಂಸ್ಥೆಗಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ, ವಿವಿಧ ತರಕಾರಿ ಇಲಾಖೆಗಳ, ದಾನಿಗಳ ಸಹಕಾರವೇ ಕಾರಣ ಎಂದು ಅವರು ಅಭಿನಂದಿಸಿದರು.


5 ದಿನಗಳ ಬ್ರಹ್ಮಕಲಶೋತ್ಸವದ ಅವಧಿಯಲ್ಲಿ ಸುಮಾರು 60,000 ಕ್ಕೂ ಮೇಲ್ಪಟ್ಟು ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿರುವುದು ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ ವೇದಿಕೆಯಲ್ಲಿದ್ದರು.


ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಖರ್ಚು- ವೆಚ್ಚಗಳ ಮಾಹಿತಿಯನ್ನು ವಿಸ್ತಾರವಾಗಿ ನೀಡಿದರು. ಸಂಚಾಲಕ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ವೇದ ಮೂರ್ತಿ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಾಯ ಹಾಗೂ ಅರ್ಚಕ ಪ್ರಕಾಶ ಹೊಳ್ಳ ಅವರು ವಾಸ್ತು ಪೂಜೆ, ಕಲಶಾಭಿಷೇಕ ಇತ್ಯಾದಿ ವಿಧಾನಗಳನ್ನು ನೆರವೇರಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಲಾಯಿಲದ ಹೊಸಕುಮೇರು ನಿವಾಸಿ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya

ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಬೆಳ್ತಂಗಡಿ ಜೈನ ಸಮಾಜದ ಸಂಘಟನೆಗಳಿಂದ ಖಂಡನೆ: ಸಮಗ್ರ ತನಿಖೆಗೆ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ

Suddi Udaya

ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ವಿಶೇಷ ಆಟಿದ ಕೂಟ, ಆಹಾರೋತ್ಸವ, ವಸ್ತು ಪ್ರದರ್ಶನ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಮಾ.17 : ಬೆಳ್ತಂಗಡಿ, ಧರ್ಮಸ್ಥಳ,ಕಕ್ಕಿಂಜೆ ಹಾಗೂ ವೇಣೂರು ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya
error: Content is protected !!