ಬೆಳ್ತಂಗಡಿ: ಬೆಂಗಳೂರಿನ ಜೈನ್ ಯುನಿವರ್ಸಿಟಿ ಯಲ್ಲಿ ನಡೆದ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆ ಅಭಿನಯದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಭೀಷ್ಮಾಸ್ತಮಾನ ನಾಟಕ ಪ್ರಥಮ ಸ್ಥಾನ ಗಳಿಸಿದೆ.
ಸ್ಪರ್ಧೆಯು ಎರಡು ಹಂತದಲ್ಲಿ ನಡೆದಿದ್ದು, ಮೊದಲ ಸುತ್ತಿನಲ್ಲಿ 25 ಕ್ಕೂ ಅಧಿಕ ತಂಡಗಳು ಭಾಗವಹಿಸಿ, 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.
ಭೀಷ್ಮಾಸ್ತಮಾನವು ಅತ್ಯುತ್ತಮ ನಾಟಕ ಪ್ರಶಸ್ತಿಯ ಜತೆಗೆ 9 ವೈಯಕ್ತಿಕ ಪ್ರಶಸ್ತಿಗಳ ಪೈಕಿ 6ನ್ನು ಗೆದ್ದುಕೊಂಡಿದೆ. ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ಅತ್ಯುತ್ತಮ ನಿರ್ದೇಶನ), ಶ್ರೀಕೃಷ್ಣ ಪಾತ್ರಧಾರಿ ಅಮಿತ್ ಕುಮಾರ್ (ಅತ್ಯುತ್ತಮ ನಟ), ಅರ್ಜುನ ಪಾತ್ರಧಾರಿ ಅಮೃತವರ್ಷಿಣಿ (ಅತ್ಯುತ್ತಮ ನಟಿ), ಮದನ್ ಮತ್ತು ಸುಬ್ರಹ್ಮಣ್ಯ ತಂಡ (ಅತ್ಯುತ್ತಮ ಸಂಗೀತ), ಅಶ್ವಿತ್ ಮತ್ತು ಆಯುಷ್ಮಾನ್ (ಅತ್ಯುತ್ತಮ ಬೆಳಕಿನ ವಿನ್ಯಾಸ) ಪ್ರಶಸ್ತಿ ಪಡೆದಿದ್ದು, ಅತ್ಯುತ್ತಮ ರಂಗಸಜ್ಜಿಕೆ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ.

ವ್ಯಾಸ ವಿರಚಿತ ಮಹಾಭಾರತ, ಕುಮಾರವ್ಯಾಸ ಭಾರತ, ಭಗವದ್ಗೀತೆ ಹಾಗೂ ಇತರ ಕೆಲವು ಪೌರಾಣಿಕ ಆಕರಗಳಿಂದ ಪ್ರೇರಿತಗೊಂಡಿರುವ, ಎಸ್ ಡಿಎಂ ಕಲಾ ಕೇಂದ್ರ ಪ್ರಸ್ತುತಪಡಿಸಿದ ಈ ನಾಟಕವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಕಂದ ಭಾರ್ಗವ ರಚಿಸಿದ್ದು, ಕೇಂದ್ರದ ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ನೀನಾಸಂ) ನಿರ್ದೇಶಿಸಿದ್ದಾರೆ. ಅಂತಿಮ ಪದವಿ ವಿದ್ಯಾರ್ಥಿಗಳಾದ ಮದನ್ ಎಂ. ಸಂಗೀತ ನೀಡಿದ್ದು, ಸುಬ್ರಹ್ಮಣ್ಯ ಜಿ. ಭಟ್ ಪಕ್ಕವಾದ್ಯದಲ್ಲಿ ಮತ್ತು ಗೌರವಿ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದರು.

(ಧೃತರಾಷ್ಟ್ರ), ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಸೋನಾಕ್ಷಿ (ಶಿಖಂಡಿ), ತೃತೀ ಯ ಪದವಿ ವಿದ್ಯಾರ್ಥಿಗಳಾದ ರಾಜೇಶ್ (ಭೀಷ್ಮ), ಸುಜಿತ್ (ಸಂಜಯ), ಹರ್ಷ (ಧರ್ಮರಾಯ), ಉಲ್ಲೇಖ (ಬ್ರೌಪದಿ), ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಜ್ಯೋತಿಕ (ಸೂತ್ರಧಾರ), ನೂತನ್ (ಎಷ್ಟು), ಭೂಷಣ್ (ಭೀಮಸೇನ) ಹಾಗೂ ಕನ್ನಿಕಾ ಎಸ್. (ಗಾಂಧಾರಿ) ಮತ್ತು (ಗಂಗೆ) ಪ್ರಮುಖ ಪಾತ್ರಗಳಿಗೆ ಜೀವ ತುಂಬಿದರು. ಮೇಳದಲ್ಲಿ ದ್ವಿತೀಯ ಪದವಿ ಯ ಮಾಧವ್, ವೈಶಾಖ್, ಆದಿತ್ಯ, ಅಕ್ಷರಿ ಮತ್ತು ಕನಿಷ್ಠಾ ಪಾತ್ರ ನಿರ್ವಹಿಸಿದರು.