ಕನ್ಯಾಡಿ : ಇಲ್ಲಿಯ ಮುರ ನೇರೋಳ್‌ಪಲ್ಕೆ ಕೇಸರಿ ಗೆಳೆಯರ ಬಳಗದ ವತಿಯಿಂದ 12 ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಮಾ.1 ರಂದು ಸಂಜೆ ಗಂಟೆ 5-30ಕ್ಕೆ ನೇರೋಳ್‌ಪಲ್ಕೆ ಅಂಗನವಾಡಿ ವಠಾರದಲ್ಲಿ ನಡೆಯಲಿದೆ.
ಸಂಜೆ 5-30ಕ್ಕೆ ಶ್ರೀ ಶನೀಶ್ವರ ಪೂಜೆ ಪ್ರಾರಂಭ, ರಾತ್ರಿ ಗಂಟೆ 7-00ಕ್ಕೆ ಮಹಾಪೂಜೆ ರಾತ್ರಿ ಗಂಟೆ 7-30ಕ್ಕೆ ಆಹ್ವಾನಿತ ತಂಡಗಳಿಂದ ಕುಣಿತ ಭಜನೆ, (ಸಂದೇಶ್ ಮದ್ದಡ್ಕ ಇವರ ನೇತೃತ್ವದಲ್ಲಿ) ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಭಜನಾ ಕಾರ್ಯಕ್ರಮ ಉದ್ಘಾಟನೆಯನ್ನು ಬೆಳ್ತಂಗಡಿ ನೋಟರಿ ವಕೀಲರು ಶಶಿಕರಣ್ ಜೈನ್ , ಸಭಾ ಅಧ್ಯಕ್ಷತೆಯನ್ನು ವಿಶ್ವನಾಥ ಚೆನ್ನಳಿಕೆ ವಹಿಸಲಿದ್ದಾರೆ. ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಯುವ ಉದ್ಯಮಿ, ಬೆಂಗಳೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ರಾತ್ರಿ ಗಂಟೆ 9-30ರಿಂದ ಫಾಲ್ಕಾನ್ಸ್ ನೃತ್ಯ ತಂಡ ಬಿಜೈ ಮಂಗಳೂರು ಇವರಿಂದ ನೂತನ ನೃತ್ಯ ಪ್ರಕಾರಗಳ ಅನಾವರಣ ನಡೆಯಲಿದೆ.