ತೆಂಕಕಾರಂದೂರು: ರಾಜ್ಯ ಹೆದ್ದಾರಿ ರಸ್ತೆಯ ಗುಂಡೇರಿ ಪರಿಸರದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಲಯನ್ಸ್ ತಂಗುದಾನದಲ್ಲಿ ಭಗವಾನ್ ಶ್ರೀ ಕೃಷ್ಣನ ಮೂರ್ತಿಯನ್ನು ಯಾರೋ ಇಟ್ಟು ಹೋದ ಘಟನೆ ಬೆಳಕಿಗೆ ಬಂದಿದೆ.
ಪ್ರಯಾಣಿಕರು ಕುಳಿತುಕೊಳ್ಳುವ ಕಡಪದಲ್ಲಿ ಶ್ರೀಕೃಷ್ಣನ ಮೂರ್ತಿ ಇಟ್ಟು ಹೂ ಹಾಕಲಾಗಿದೆ. ಯಾರೂ ಈ ರೀತಿ ಮೂರ್ತಿ ಇಟ್ಟು ಹೋಗಿದ್ದರೆಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.