21.6 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಉಜಿರೆ: “ವಿದ್ಯಾರ್ಥಿಗಳಲ್ಲಿ ಬರೀ ಜ್ಞಾನ ಸಾಲದು, ಜ್ಞಾನದ ಜೊತೆ ಕೌಶಲ್ಯಗಳ ಅಗತ್ಯತೆ ಇದೆ” ಎಂದು ರಾಮನ್ ಪರಿಣಾಮವನ್ನು ಪ್ರಾತ್ಯಕ್ಷಿಕೆಯ ಮೂಲಕ ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನ ಉಪನ್ಯಾಸಕಿ ಡಾ. ನೆಫಿಸತ್.ಪಿ ವಿದ್ಯಾರ್ಥಿಗಳೊಂದಿಗೆ ವಿಷಯ ವಿವರಿಸಿದರು.

ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಿ.ವಿ ರಾಮನ್ ಅವರ ಸಾಶೋಧನೆಯಾದ ‘ರಾಮನ್ ಪರಿಣಾಮ’ಕ್ಕೆ ನೋಬೆಲ್ ಪ್ರಶಸ್ತಿ ದೊರೆತ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಿದ ವಿಜ್ಞಾನ ದಿನದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪೋಸ್ಟರ್ ಮೇಕಿಂಗ್, ವಿಜ್ಞಾನ ಮಾದರಿ ತಯಾರಿ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕಿ ಶಾಂಟಿ ಜಾರ್ಜ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಶಿಧರ್ ವಂದಿಸಿ, ನಿನಾದ್ ನಿರೂಪಿಸಿದರು.

Related posts

ಉಜಿರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಮೆರವಣಿಗೆ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಸಂಸದರನ್ನು ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya

ಪುಂಜಾಲಕಟ್ಟೆ ಬಸವನಗುಡಿ ನಿವಾಸಿ ಚಿನ್ನಸ್ವಾಮಿ ಮೇಸ್ತ್ರಿ ನಿಧನ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಹೊಸಂಗಡಿ: ಗಾಳಿ ಮಳೆಗೆ 5 ಮನೆಗಳಿಗೆ ಹಾನಿ : ಸ್ಥಳಕ್ಕೆ ಪಂಚಾಯತು, ಕಂದಾಯ ಅಧಿಕಾರಿಗಳ ಭೇಟಿ

Suddi Udaya
error: Content is protected !!