ಉಜಿರೆ: ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಕಲಿಯಲು ಬೇಕಾದಷ್ಟು ಇದೆ. ಶಿಕ್ಷಣ ಯಾವತ್ತೂ ಮುಗಿಯುವುದಿಲ್ಲ ಎಂದು ಪತ್ರಿಕಾ ವರದಿಗಾರ ಹೆರಾಲ್ಡ್ ಪಿಂಟೊ ಹೇಳಿದರು.

ಅವರು ಫೆ. 23ರಂದು ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಕ್ರೈಸ್ತ ಧರ್ಮ ಶಿಕ್ಷಣ ದಿನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅವರವರ ಪೋಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ದುಡಿಯುತ್ತಾರೆ. ಮಕ್ಕಳಿಗೆ ಶಿಕ್ಷಣ ಪಡೆಯುವುದೇ ಮುಖ್ಯ ಹೊರತು ಬೇರೆ ಏನು ಕೆಲಸ ಇಲ್ಲ. ಕೆಟ್ಟ ಕೆಲಸಗಳನ್ನು ಮಾಡದೆ, ಪರರನ್ನು ಗೌರವಿಸುವುದು ಪ್ರೀತಿಸುವ ಗುಣ ಹೊಂದಿರಬೇಕು. ನಮ್ಮ ಸಹಪಾಠಿಗಳು ವಿದ್ಯಾಭ್ಯಾಸದಲ್ಲಿ ದೂರ ಇದ್ದರೆ ಅಂತವರಿಗೆ ಸಹಾಯ ಮಾಡಬೇಕು. ಅದೇ ದೊಡ್ಡ ಸೇವೆ. ಮೊದಲೆಲ್ಲ ಮಕ್ಕಳು ರಜೆಯಲ್ಲಿ ಕೆಲಸಕ್ಕೆ ಹೋಗಿ ದುಡಿಯುತ್ತಿದ್ದರು ಈಗ ಮಕ್ಕಳು ದುಡಿಯಲು ಅವಕಾಶ ಇಲ್ಲ ಅದುದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವಿಸಬೇಕು. ಅನಗತ್ಯ ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದು ಹೇಳಿದರು.

ಚರ್ಚ್ ಪ್ರಧಾನ ಧರ್ಮಗುರು ಅಬೆಲ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶುಭ ಹಾರೈಸಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯ ಕ್ಷ ಆಂಟೋನಿ ಫೆರ್ನಾಂಡಿಸ್, ಉಜಿರೆ ಸಿಸ್ಟರ್ ಆಫ್ ಮೇರಿ ಇಮ್ಯಕುಲೆಟ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ನ್ಯಾನ್ಸಿ ಡಯಸ್, ಆಯೋಗದ ಸಂಚಾಲಕಿ ಲವೀನಾ ಫೆರ್ನಾಂಡೀಸ್, ಶಿಕ್ಷಣ ಸಂಯೋಜಕ ಗ್ರೆಗ್ ಮೆಲ್ಸ್ಟಾರ್, ಬಹುಮಾನಗಳ ಪ್ರಾಯೋಜಕ ಅನಿಲ್ ಡಿಸೋಜಾ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಣದಲ್ಲಿ ಪ್ರಥಮ, ದ್ವೀತಿಯ ಸ್ಥಾನ ಮತ್ತು ಪೂರ್ಣ ಹಾಜರಾತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹೆಜಲ್ ಜೀಶ ಪಿಂಟೊ ಕಾರ್ಯಕ್ರಮದ ನಿರೂಪಿಸಿದರು. ಶರಣ್ ಡಿಸೋಜಾ ಸ್ವಾಗತಿಸಿ, ಸಂಯೋಜಕ ಗ್ರೆಗ್ ವಂದಿಸಿದರು. ದನ ಸಹಾಯ ಮಾಡಿದವರಿಗೆ ಗೌರವಿಸಲಾಯಿತು.