24.1 C
ಪುತ್ತೂರು, ಬೆಳ್ತಂಗಡಿ
March 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ರುದ್ರಗಿರಿಯಲ್ಲಿ ಶಿವರಾತ್ರಿಯ ತಾಳಮದ್ದಳೆ

ತಣ್ಣೀರುಪಂತ : ಇಲ್ಲಿಯ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಶ್ರೀ ಮಹಿಷಮರ್ದಿನಿ ಕಲಾ ಪ್ರತಿಷ್ಠಾನ ಚಾರ -ಹೆಬ್ರಿ ಸಂಯೋಜನೆಯಲ್ಲಿ ಇಂದ್ರಕೀಲಕ -ಊರ್ವಶಿ ಶಾಪ ತಾಳಮದ್ದಳೆ ಜರಗಿತು.

ಭಾಗವತರಾಗಿ ಕುಮಾರಿ ಸ್ನೇಹ ಆಚಾರ್ಯ ಕಾರ್ಕಳ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥದಾರಿಗಳಾಗಿ ಜಬ್ಬಾರ್ ಸಮೋ (ಈಶ್ವರ )ನಾ. ಕಾರಂತ ಪೆರಾಜೆ(ಊರ್ವಶಿ )ದಿವಾಕರ ಆಚಾರ್ಯ ಗೇರುಕಟ್ಟೆ (ದೇವೇಂದ್ರ )ವಿದ್ವಾನ್ ಕೇಕಣಾಜೆ ಕೇಶವ ಭಟ್(ಅರ್ಜುನ )ಚಾರ ಪ್ರದೀಪ ಹೆಬ್ಬಾರ್ (ರ್ಪಾರ್ವತಿ ಮತ್ತು ಚಿತ್ರಸೇನ )ಭಾಗವಸಿದ್ದರು.

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಶೆಟ್ಟಿ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.ದೇವಳದ ಸಮಿತಿಯ ಸದಸ್ಯರು ಕಲಾವಿದರನ್ನು ಗೌರವಿಸಿದರು.
ಚಾರ ಪ್ರದೀಪ ಹೆಬ್ಬಾರ್ ಸ್ವಾಗತಿಸಿ ಪ್ರಭಾಕರ ಗೌಡ ಪೊಸಂದಡಿ ವಂದಿಸಿದರು .

Related posts

ಸಾಂಸ್ಕೃತಿಕ ಸ್ಪರ್ಧೆ: ಎ ಎ ಅಕಾಡೆಮಿ ಸಹಯೋಗದ ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಆಗುಂಬೆ ವರ್ಗಾವಣೆ ಆದೇಶ ರದ್ದು: ಉಜಿರೆ ಗ್ರಾ.ಪಂ ಪಿಡಿಒ ಆಗಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ಮುಂದುವರಿಕೆ

Suddi Udaya

ಕುವೆಟ್ಟು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಸರಕಾರ ನೀಡಿದ ಉಚಿತ ಪಾದರಕ್ಷೆ ವಿತರಣಾ ಸಮಾರಂಭ

Suddi Udaya

ಉಜಿರೆಯ ಡಾ| ಸುಜಾತ ದಿನೇಶ್ ಅವರಿಗೆ ಪಿ ಹೆಚ್ ಡಿ ಪದವಿ

Suddi Udaya

ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ ನಿಕ್ಷಯ್ ಶಿಬಿರ

Suddi Udaya

ಉಜಿರೆ ಹಳೆಪೇಟೆ ನವೀಕೃತ ಶಾಲೆ ಹಸ್ತಾಂತರ

Suddi Udaya
error: Content is protected !!