ಬೆಳ್ತಂಗಡಿ : ರೆಂಕೆದಗುತ್ತು ಭಾಸ್ಕರ್ ಪೂಜಾರಿಯವರ ಮನೆಯ ಆವರಣದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ವಿತರಣೆಯ ಕಾರ್ಯಕ್ರಮ ನಡೆಯಿತು.
ಮಾರ್ಚ್ 2ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಮಡಿಲ ಪ್ರಸಾದ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಮಾ.1-5 ವರೆಗೆ ನಡೆಯುವ ಕಾರ್ಯಕ್ರಮದ ವಿವರವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಗುರುನಾರಾಯಣಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯರಾಮ ಬಂಗೇರ, ಹರಿದಾಸ್ ಕೇದೆ, ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಮತಿ ಪ್ರಮೋದ್, ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ರಾಘವೇಂದ್ರ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಸುವರ್ಣ, ಕರುಣಾಕರ ಪೂಜಾರಿ, ಭಾಸ್ಕರ್ ವಿಎ, ಶ್ರೀಮತಿ ಮಂಜುಳಾ ಜಗದೀಶ್ ಪೂಜಾರಿ, ಶ್ರೀಮತಿವಿಜಯ ಪೂಜಾರಿ, ರಮೇಶ್ ಪೂಜಾರಿ, ಪ್ರೇಮಾ ಮೋಹನ್ ಪೂಜಾರಿ, ಶ್ರೀಮತಿ ಸುಶೀಲಾಕ್ಷಿ, ಶ್ರೀಮತಿ ರೇವತಿ, ರೋಹಿಣಿ, ಶ್ರೀಮತಿ ಸಾವಿತ್ರಿ, ಶ್ರೀಮತಿ ಗೀತಾ ಮುಂತಾದ ಪ್ರಮುಖರು ಹಾಜರಿದ್ದರು.
ಸಚಿನ್ ಸಾಲಿಯಾನ್ ಧನ್ಯವಾದ ಸಮರ್ಪಿಸಿದರು.