ಬೆಳ್ತಂಗಡಿ : ಜಮ್ಮು-ಕಾಶ್ಮೀರ ನಿವೃತ್ತ ಡಿಜಿಪಿ ಶೇಷ ಪೌಲ್ ಮತ್ತು ಕುಟುಂಬ ಹಾಗೂ ರಾಜಸ್ಥಾನ ನಿವೃತ್ತ ಡಿಜಿಪಿ ಎನ್.ಆರ್.ಕೆ. ರೆಡ್ಡಿ ಮತ್ತು ಕುಟುಂಬ ಮಾ.1ರಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಧರ್ಮಾಧಿಕಾರಿ ಡಾ|| ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಿವೃತ್ತ ಇಬ್ಬರು ಡಿಜಿಪಿಯವರಿಗೆ ಜಿಲ್ಲಾಡಳಿತದಿಂದ Z+ ಭದ್ರತೆ ನೀಡಲಾಗಿತ್ತು. ಧರ್ಮಸ್ಥಳ ಪೊಲೀಸರು ಮತ್ತು ಧರ್ಮಸ್ಥಳ ದೇವಸ್ಥಾನದ ಮ್ಯಾನೇಜರ್ ಪಾರ್ಶ್ವನಾಥ್ ಅವರು ವಿಶೇಷವಾಗಿ ಮಂಜುನಾಥ ಸ್ವಾಮಿ ದರ್ಶನಕ್ಕೆ ಸಹಕರಿಸಿದರು.