April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಉಚಿತ ವೈದ್ಯಕೀಯ ದಂತ ಚಿಕಿತ್ಸೆ ಶಿಬಿರ

ಗುರುವಾಯನಕೆರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆ ಮತ್ತು ಕರ್ನಾಟಕ ರಾಜ್ಯ ಎಸ್. ಡಿ. ಎಂ. ಸಿ ಸಮನ್ವಯ ಕೇಂದ್ರ ವೇದಿಕೆ, ಬೆಳ್ತಂಗಡಿ ಸಹಯೋಗದೊಂದಿಗೆ ಶಾಲಾ ಎಸ್. ಡಿ.ಎಂ.ಸಿ ಹಾಗೂ ಎ. ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇವರ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸೆ ಶಿಬಿರ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ವಹಿಸಿ ಶುಭ ಹಾರೈಸಿದರು. ಶಾಲಾ ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಕವಿತಾ, ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಡಾ| ಶಿಲ್ಪ ಮತ್ತು ಡಾ| ರೇಷ್ಮಾ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಎಸ್‌.ಡಿ ಎಂ.ಸಿ ಸದಸ್ಯರು , ಡೆಂಟಲ್ ಸೈನ್ಸ್ ನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟು 111 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಇದರ ಪ್ರಯೋಜನ ಪಡೆದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಮಾ. ಎನ್ ಸ್ವಾಗತಿಸಿದರು. ಶಿಕ್ಷಕಿ ವೇರೋನಿಕ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರಿಗೆ ಗೌರವ ಸನ್ಮಾನ

Suddi Udaya

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ ದಳದಿಂದ ಚಾರಣ, ಸ್ವಚ್ಚತಾ ಆಂದೋಲನ ಮತ್ತು ಯುವ ದಿನಾಚರಣೆ

Suddi Udaya

ಪುದುವೆಟ್ಟು ಓಂಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ 3 ಜೋಡಿ ಸರಳ ಸಮೂಹಿಕ ವಿವಾಹ

Suddi Udaya

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

Suddi Udaya
error: Content is protected !!