September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಉಚಿತ ವೈದ್ಯಕೀಯ ದಂತ ಚಿಕಿತ್ಸೆ ಶಿಬಿರ

ಗುರುವಾಯನಕೆರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆ ಮತ್ತು ಕರ್ನಾಟಕ ರಾಜ್ಯ ಎಸ್. ಡಿ. ಎಂ. ಸಿ ಸಮನ್ವಯ ಕೇಂದ್ರ ವೇದಿಕೆ, ಬೆಳ್ತಂಗಡಿ ಸಹಯೋಗದೊಂದಿಗೆ ಶಾಲಾ ಎಸ್. ಡಿ.ಎಂ.ಸಿ ಹಾಗೂ ಎ. ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಇವರ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸೆ ಶಿಬಿರ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ವಹಿಸಿ ಶುಭ ಹಾರೈಸಿದರು. ಶಾಲಾ ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಕವಿತಾ, ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಡಾ| ಶಿಲ್ಪ ಮತ್ತು ಡಾ| ರೇಷ್ಮಾ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಎಸ್‌.ಡಿ ಎಂ.ಸಿ ಸದಸ್ಯರು , ಡೆಂಟಲ್ ಸೈನ್ಸ್ ನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟು 111 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಇದರ ಪ್ರಯೋಜನ ಪಡೆದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಮಾ. ಎನ್ ಸ್ವಾಗತಿಸಿದರು. ಶಿಕ್ಷಕಿ ವೇರೋನಿಕ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಜೀವನ ಕೌಶಲ’ ಕಾರ್ಯಾಗಾರ

Suddi Udaya

ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 35ನೇ ವರ್ಷದ ಮೊಸರು ಕುಡಿಕೆ ಉತ್ಸವದ ಗೌರವಾಧ್ಯಕ್ಷರಾಗಿ ಪದ್ಮನಾಭ ಸುವರ್ಣ ಬಳ್ಳಮಂಜ, ಅಧ್ಯಕ್ಷರಾಗಿ ಪ್ರಶಾಂತ್ ಎಂ. ಪಾರೆಂಕಿ ಆಯ್ಕೆ

Suddi Udaya

ಗೇರುಕಟ್ಟೆ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರು ವಿ. ಲಕ್ಷ್ಮೇ ಗೌಡ ಹೃದಯಾಘಾತದಿಂದ ನಿಧನ

Suddi Udaya

ಕುಂಟಿನಿ ದ.ಕ ಜಿ.ಪಂ.ಕಿ.ಪ್ರಾ ಶಾಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಮತ್ತು ಶಾಲಾ ಕೈತೋಟ ರಚನೆ

Suddi Udaya

ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

Suddi Udaya

ಎಸ್.ಕೆ.ಪಿ.ಎ ಬೆಳ್ತಂಗಡಿ ವಲಯದ ವತಿಯಿಂದ ನಿವೃತ್ತ ಯೋಧ ಅಶೋಕ ಕುಮಾರ್ ಅವರಿಗೆ ಗೌರವ

Suddi Udaya
error: Content is protected !!