32.5 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುತ್ತೂರಿನಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೋಟ್ಟುರವರಿಗೆ ಅಭಿವಂದನಾ ಕಾರ್ಯಕ್ರಮ

ಬೆಳ್ತಂಗಡಿ: ನ್ಯಾಷನಲ್ ಪ್ರೆಸ್ ಆಫ್ ಇಂಡಿಯಾ ಎಸ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ರವರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಶಿಕುಮಾರ್ ರೈ ಬಾಲ್ಯೋಟ್ಟು ರವರಿಗೆ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಮಾ.1 ರಂದು ಅಭಿವಂದನಾ ಕಾರ್ಯಕ್ರಮ ಪುತ್ತೂರು ಬಂಟರ ಭವನ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ ಮಾತನಾಡಿ ಸಹಕಾರಿ ರಂಗದಲ್ಲಿ ಕೇಂದ್ರ ಬ್ಯಾಂಕ್ ನ್ನು ಉತ್ತುಂಗಕ್ಕೆ ಏರಿಸಿ, ಸಮಾಜದೊಂದಿಗೆ ಅತ್ಯುತ್ತಮ ಸೇವೆ ಸಲ್ಲಿಸಿದವರು ಡಾ.ರಾಜೇಂದ್ರ ಕುಮಾರ್. ಸಾಮಾಜಿಕವಾಗಿ ಯಶಸ್ವಿ ಪಥದಲ್ಲಿ ಮುನ್ನಡೆಯುತ್ತಿರುವ ಶಶಿ ಕುಮಾರ್ ರೈ ಬಾಲ್ಯೋಟ್ಟುರವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಹಿಸಿದ್ದರು.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಶಾಮ್ ಭಟ್ ಅಭಿನಂದಿಸಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅಭಿವಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಮಂಗಳೂರು ಮಾಸ್ ಲಿ. ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು,ದ.ಕ ಹಾಲು ಒಕ್ಕೂಟದ ಅದ್ಯಕ್ಷ ಕೆಪಿ ಸುಚರಿತಾ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ ನಿರ್ದೇಶಕ ಭಾಸ್ಕರ ಕೋಟ್ಯಾನ್, ಮೂಡ ಸಂಸ್ಥೆಯ ಸದಾಶಿವ ಉಳ್ಳಾಳ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಭಿವಂದನಾ ಸಮಿತಿ ಗೌರವ ಸಲಹೆಗಾರ ನನ್ಯ ಅಚ್ಚುತ ಮೂಡತ್ತಾಯ, ಅಧ್ಯಕ್ಷ ಎಸ್.ಬಿ. ಜಯರಾಮ ರೈ, ಸಂಚಾಲಕರಾದ ಎಸ್.ಎನ್ ಮನ್ಮಥ, ಕುಶಾಲಪ್ಪ ಗೌಡ ಪೂವಾಜೆ, ಕಾರ್ಯದರ್ಶಿ ಜಯಪ್ರಕಾಶ್ ರೈ.ಸಿ, ಕೋಶಾಧಿಕಾರಿ ಹರೀಶ್ ರೈ ಪಿ., ತಾಲೂಕು ಸಂಚಾಲಕರಾದ ಪುತ್ತೂರು ಪ್ರಕಾಶ್ಚಂದ್ರ ರೈ ಕೈಕಾರ, ಸುಳ್ಯ ಸಂತೋಷ್ ಕುತ್ತಮೊಟ್ಟೆ, ಕಡಬ ಗಣೇಶ್ ಉದ್ದನಡ್ಕ, ಬೆಳ್ತಂಗಡಿ ರಾಘವೇಂದ್ರ ನಾಯಕ್,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸಿಇಓ ಗೋಪಾಲಕೃಷ್ಣ ಭಟ್, ಅಭಿವಂದನಾ ಸಮಿತಿ ಸದಸ್ಯರು , ಬೆಳ್ತಂಗಡಿ, ಪುತ್ತೂರು, ಸುಳ್ಯ ಕಡಬ, ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಪದಾಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.

ಸಹಕಾರಿ ಯೂನಿಯನ್ ನಿರ್ದೇಶಕರಾದ ಸತೀಶ್ ಕುಮಾರ್ ಕಾಶಿಪಟ್ಣ, ವಿಷ್ಣು ಭಟ್ ಮೂಲೆ ತೋಟ,ಮಂಜುನಾಥ ಎನ್.ಎಸ್,ಪ್ರವೀಣ್ ಗಿಲ್ಬರ್ಟ್ ಡಿಸೋಜಾ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಅಭಿವಂದನಾ ಸಮಿತಿ ಎಸ್.ಬಿ ಜಯರಾಮ ರೈ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಪೇಕ್ಷಾ ಪೈ ಪ್ರಾರ್ಥನೆಗೈದರು.ರಾಕೇಶ್ ರೈ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

Related posts

ಮರೋಡಿ: ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಬಳ್ಳಾಲ್ ಕಾಂಗ್ರೇಸ್ ಸೇರ್ಪಡೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಮಾಜಿ ಸದಸ್ಯ ಗೋಪಾಲ ಪೂಜಾರಿ ನಿಧನ

Suddi Udaya

ಅಯೋಧ್ಯೆ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ: ಬಂದಾರು ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಜಪ, ಭಜನೆ

Suddi Udaya

ಧರ್ಮಸ್ಥಳದ ಬಿ. ಪ್ರಕಾಶ ದೇವಾಡಿಗರವರು ಸ್ಯಾಕ್ಸೋಪೋನ್ ಕಾರ್ಯಕ್ರಮ ನೀಡಲು ಮೂರನೇ ಬಾರಿಗೆ ಅಮೇರಿಕಕ್ಕೆ

Suddi Udaya

ಕಳೆಂಜ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ: ಸರಕಾರಕ್ಕೆ ಮನವಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭ

Suddi Udaya
error: Content is protected !!