24.4 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಜಾಲಿ ಓ ಎ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರ

ಮುಂಡಾಜೆ: ಶ್ರೀಮತಿ ಜಾಲಿ ಓ ಎ ಅವರು ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ 1991ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ, 2004ರಿಂದ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ, ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಫೆ.28ರಂದು ವಯೋ ನಿವೃತ್ತಿ ಹೊಂದಿದರು.

ಈ ವೇಳೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿಯವರಾದ ಕೃಷ್ಣ ಭಟ್ ರವರು ನಿವೃತ್ತರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಖಜಾಂಚಿಯವರಾದ ಅಚ್ಯುತ ನಾಯಕ್, ಶತಾಬ್ದಿ ವಿದ್ಯಾಲಯ ಸಮಿತಿ ಮುಂಡಾಜೆಯ ಸಂಚಾಲಕರಾದ ನಾರಾಯಣ ಫಡ್ಕೆ, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆಯ ಅಧ್ಯಕ್ಷ ವಿನಯಚಂದ್ರ, ಸದಸ್ಯರಾದ ವಿಶ್ವನಾಥ ಶೆಟ್ಟಿ, ಶ್ರೀಮತಿ ಭಾರತಿ ಫಡ್ಕೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಸಹ ಪ್ರಾಧ್ಯಾಪಕರಾದ ಡಾ. ರವಿ ಎಂ. ಎನ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡ ಇತಿಹಾಸ ಉಪನ್ಯಾಸಕಿ ಶ್ರೀಮತಿ ಗೀತಾ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

Related posts

ಡಿ.3: ಬೆಳ್ತಂಗಡಿ ಹಳೆಕೋಟೆ ಜೋರ್ಡನ್ ರಿವರ್ ವೆಲ್ ವ್ಯೂ ರೂಮ್ಸ್ & ಸೂಟ್ಸ್ ವಿಸ್ಕೃತ ಕಟ್ಟಡದ ಉದ್ಘಾಟನೆ

Suddi Udaya

ಶಿರಸಿಯ ನಾರಾಯಣ ಆರ್ ಕೋಮಾರ್ ರವರಿಂದ ಸೇವಾಧಾಮಕ್ಕೆ ಧನ ಸಹಾಯ

Suddi Udaya

ಯುವಕರಿಬ್ಬರ ನಡುವೆ ಗಲಾಟೆ: ಮೂಗಿಗೆ ಕಚ್ಚಿ ಗಾಯಗೊಳಿಸಿದ ಸ್ನೇಹಿತ

Suddi Udaya

ಗೇರುಕಟ್ಚೆ ಮುಖ್ಯ ರಸ್ತೆಯಲ್ಲಿ ಕೃತಕ ನೆರೆ

Suddi Udaya

ಉಜಿರೆ: ಶ್ರೀ. ಧ.ಮಂ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

Suddi Udaya

ಮೇ 26: ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ

Suddi Udaya
error: Content is protected !!