September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ಲಾಲು ಗ್ರಾ.ಪಂ. ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

ಶಿರ್ಲಾಲು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯನ್ನು ಸರ್ಕಾರದ ಆದೇಶದಂತೆ ಫೆ. 28 ರಂದು ಶಿರ್ಲಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ ಎಂ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಶೀಲಾ ಸ್ವಾಗತಿಸಿದರು. ಹಾಗೂ 2024-25 ನೇ ಸಾಲಿನ ವಿಶೇಷಚೇತನರ ವಾರ್ಷಿಕ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಹರೀಶ್ ಇವರು ವಾಚಿಸಿದರು.
ವಿಕಲಚೇತನರಿಗೆ ವಿಕಲಚೇತನರ ಇಲಾಖೆ ಹಾಗೂ ಇತರ ಎಲ್ಲಾ ಇಲಾಖೆಗಳಿಂದ ಸಿಗುವ ಸರಕಾರದ ಸಮಗ್ರ ಮಾಹಿತಿಯನ್ನು ತಾಲೂಕು ವಿವಿದೊದ್ದೇಶ ಪುನರ್ವಸತಿ ಸಂಯೋಜಕರಾದ ಜೋನ್ ಬ್ಯಾಪ್ಟಿಸ್ಟ್ ಡಿ ಸೋಜಾ ನೀಡಿದರು.
2024-25 ನೇ ಸಾಲಿನ ಶೇಕಡಾ 5% ರ ಅನುದಾನದಲ್ಲಿ 3 ಜನ ವಿಕಲಚೇತನರಿಗೆ ನೀರಿನ ಟ್ಯಾಂಕ್ ಹಾಗೂ ಒಬ್ಬರಿಗೆ ವಾಕಿಂಗ್ ಸ್ಟಿಕ್ ಮತ್ತು ವಿಶೇಷಚೇತನ ವಿದ್ಯಾರ್ಥಿಗೆ ಸ್ಟಡಿ ಟೇಬಲ್ ನೀಡಲಾಯಿತು, ಹಾಗೂ 5 ಜನ ವಿಕಲಚೇತನರಿಗೆ ಮನೆದುರಸ್ತಿಗೆ ಮತ್ತು ವೈದ್ಯಕೀಯ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು.

ಪಂಚಾಯತ್ ಅಬಿವೃದ್ದಿ ಅಧಿಕಾರಿಯವರು ಪಂಚಾಯತ್ ನಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯ ಹಾಗೂ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರು ಪಂಚಾಯತ್ ಹಾಗೂ ಇತರ ಇಲಾಖೆಗಳ ಪ್ರಯೋಜನಗಳನ್ನು ಹೆಚ್ಚಿನ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಾಗಿ ತಿಳಿಸಿದರು.


ವಿಕಲಚೇತನರ ಬೇಡಿಕೆಗಳನ್ನು ಸಭೆಯಲ್ಲಿ ಪಡೆದುಕೊಳ್ಳಲಾಯಿತು.
ಸಭೆಯಲ್ಲಿ ಪಂಚಾಯತ್ ಸಿಬ್ಬಂದಿಗಳು, ಗ್ರಂಥಾಲಯ ಮೇಲ್ವೀಚಾರಕಿ, ಸಂಜೀವಿನಿ ಒಕ್ಕೂಟದ ಎಮ್.ಬಿ.ಕೆ, ಎಲ್.ಸಿಆರ್ ಪಿ, ಪಶುಸಖಿ ಸಹಕರಿಸಿದರು. ಸಭೆಯಲ್ಲಿ ಪಂಚಾಯತ್ ನ ಸರ್ವ ಸದಸ್ಯರು, ಅಳದಂಗಡಿ ಗ್ರಾಮ ಪಂಚಾಯತ್ ನ ವಿ ಆರ್ ಡಬ್ಲೂ ಸಂದ್ಯಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವಿಕಲಚೇತನರು ಹಾಗೂ ಪೋಷಕರು ಉಪಸ್ಥಿತರಿದ್ದರು.

Related posts

ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಜನಾರ್ದನ್ ನೇಮಕ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಜಯ

Suddi Udaya

ಮುಂಡಾಜೆ ಪ.ಪೂ. ಕಾಲೇಜು ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿಯಲ್ಲಿ ಯುವವಾಹಿನಿಯಿಂದ “ಡೆನ್ನಾನ ಡೆನ್ನನ” ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ

Suddi Udaya

ವೇಣೂರು ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಬೆಳಾಲು ಮಿನಂದೇಲು ಬಳಿ ಹೊತ್ತಿ ಉರಿದ ಸ್ಕೂಟಿ : ಚಿಕಿತ್ಸೆ ಫಲಕಾರಿಯಾಗದೆ ದಿಯಾನ್ ಸಾವು

Suddi Udaya
error: Content is protected !!