ಉಜಿರೆ: ಮಂಗಳೂರು ಎಂಪೀರಿಯಾ ಕಾರ್ಪೋರೇಶನ್ ಸಂಸ್ಥೆಯ 2ನೇ ವರ್ಷದ ಸಂಭ್ರಮಾಚರಣೆ ಹಾಗೂ ಮಾಹಿತಿ ಕಾರ್ಯಾಗಾರವು ಮಾ.2 ರಂದು ಉಜಿರೆ ಒಶಿಯನ್ ಪರ್ಲ್ ನಲ್ಲಿ ನಡೆಯಿತು.

ಗೋಕುಲಮಾರ್ಟ್ ಫರ್ನಿಚರ್ & ಇಲೆಕ್ಟ್ರಾನಿಕ್ಸ್ ವಿಂಗ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಕಿಶನ್ ಆಚಾರ್ಯ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಎಂಪೀರಿಯಾ ಕಾರ್ಪೋರೇಶನ್ ಹಾಗೂ ಗೋವರ್ಧನ ಗಿರಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕ ನಿಶಾನ್ ಕೃಷ್ಣ ಭಂಡಾರಿ ಸಂಸ್ಥೆಯ ಕಾರ್ಯ ಯೋಜನೆ ಮತ್ತು ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಮುಂಡಾಜೆ ಯಂಗ್ ಚಾಲೆಂಜರ್ಸ್ ನ ನಾಮದೇವ ರಾವ್, ಪುಷ್ಪರಾಜ್ ಗೌಡ, ಜಯರಾಜ್ ಸಾಲ್ಯಾನ್, ನಾಟಿ ವೈದ್ಯ ಬಾಬು ಮುಗೇರ ರವರುಗಳನ್ನು ಸನ್ಮಾನಿಸಲಾಯಿತು.

ಎಂಪೀರಿಯಾ ಸಂಸ್ಥೆಯ ಸಾಧಕರಾದ ಮಮತಾ ತೋಟತ್ತಾಡಿ, ಅಂಟೋನಿ, ಮಹಮ್ಮದ್ ನಜಿರ್, ಆಯಿಷತ್ ಜೆಸಿಲಾ, ವರ್ಗಿಸ್, ಪ್ರಶಾಂತ್ ಗೇರುಕಟ್ಟೆ, ಹರಿಣಿ, ಜಯಲಕ್ಷ್ಮಿ, ಧನರಾಜ್, ಗುಣವತಿ, ಕೇಶವ ಗೌಡ, ಶ್ರೀಧರ್ ಶೆಟ್ಟಿಪಾಲ್, ಜಯಂತಿ ಕಾಶಿಪಟ್ನ, ಧನಂಜಯ್, ಸುಂದರ ಡಿ. ಧರ್ಮಸ್ಥಳ, ಮುಕುಂದ ಎಂ.ಕೆ, ಶಶಿಧರ ಧರ್ಮಸ್ಥಳ, ಸುನಿತಾ ಧರ್ಮಸ್ಥಳ, ಮಿಥುನ್ ಕುಮಾರ್, ಚಂದ್ರಶೇಖರ್ ಭವ್ಯ, ಚಂದ್ರಶೇಖರ್ ಗೌಡ ಭವ್ಯಶ್ರೀ, ಕಮಲಾಕ್ಷ ಗೌಡ ಕಡಿರುದ್ಯಾವರ, ಹರಿಣಾಕ್ಷಿ ಶ್ರೀನಿವಾಸ ಮಂಗಳೂರು, ಪ್ರಮೋದ್ ನಾಯ್ಕ ಕಾನರ್ಪ, ಮುಕೇಶ್ ಮೂಡಿಗೆರೆ, ವರ್ಗಿಸ್ ಪಾಲೇಲಿ, ಪ್ರಮೋದ್ ಕವಿತಾ ರವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ನಂದೀಶ್ ಕೆ. ಭಂಡಾರಿ ಮುಂಡಾಜೆ, ರಾಮಚಂದ್ರ ಗೌಡ ಕೆ. ಕಾನರ್ಪ, ಭವ್ಯ ಚಂದ್ರಶೇಖರ್ ಗೌಡ ಕಾನರ್ಪ, ಭವ್ಯಶ್ರೀ ಚಂದ್ರಶೇಖರ್ ಗೌಡ ಕಡಿರುದ್ಯಾವರ, ಹಾಗೂ ನೂತನ ಹೂಡಿಕೆದಾರರು ಉಪಸ್ಥಿತರಿದ್ದರು.
ಯುವ ಸಾಹಿತಿ ಚಂದ್ರಹಾಸ ಬಳಂಜ ನಿರೂಪಿಸಿದರು. ಕಾರ್ಯಕ್ರಮದ ಆಯೋಜಕರಾದ ಭವ್ಯ ಚಂದ್ರಶೇಖರ್ ಗೌಡ ಕಾನರ್ಪ ವಂದಿಸಿದರು. ಚಿತ್ರ: ಸುರೇಶ್ ಕೌಡಂಗೆ