24.1 C
ಪುತ್ತೂರು, ಬೆಳ್ತಂಗಡಿ
September 6, 2026
ನಿಧನ

ಅಜಿಕುರಿ ಯಾಕೂಬ್ ಅವರ ಮೊಮ್ಮಗು ಸೌದಿ ಅರೇಬಿಯಾದಲ್ಲಿ ಕೊನೆಯುಸಿರು

ಬೆಳ್ತಂಗಡಿ; ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಎರಡು ವರ್ಷದ ಮಗು ಮುಹಮ್ಮದ್ ಅಭಿಯಾನ್ (2ವ) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾ.2 ರಂದು ಕೊನೆಯುಸಿರೆಳೆದಿದೆ.

ಹೈದರ್ ಅಲಿ ಮತ್ತು ಮಹ್‌ರೂಫಾ ದಂಪತಿಯ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳ ಪೈಕಿ ಕೊನೆಯವನಾಗಿರುವ ಮುಹಮ್ಮದ್ ಅಭಿಯಾನ್ ಅವರಿಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ನಿನ್ನೆಯ ದಿನ ಜ್ಬರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.

ಬಾಲಕನ ತಂದೆ ಹೃದರ್ ಅಲಿ ಅವರು ಬಿಲ್ಡಿಂಗ್ ಕೆಲಸ ನೋಡಿಕೊಂಡು ಸೌದಿಯಲ್ಲೇ ಇದ್ದಾರೆ. ಪತ್ನಿ ಮಕ್ಕಳು ಮಾತ್ರವಲ್ಲದೆ ಪತ್ನಿಯ ಕುಟುಂಬಸ್ತರೂ ಕೂಡ ಬಹುತೇಕ ಮಂದಿ ಸೌದಿಯಲ್ಲೇ ಅಕ್ಕ ಪಕ್ಕ ಜೊತೆಯಲ್ಲೇ ನೆಲೆಸಿದ್ದಾರೆ. ಮೃತ ಬಾಲಕ ತಂದೆ ತಾಯಿ ಮಾತ್ರವಲ್ಲದೆ ಅಕ್ಕಅಲೀನಾ ಫಾತಿಮಾ, ಅಣ್ಣ ಮುಹಮ್ಮದ್ ಅಯಾನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರೀಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ಮಾ.4 ರಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನದ ಒಳಗೆ ನಡೆಯಲಿದೆ ಎಂದು ಮಗುವಿನ ದೊಡ್ಡಪ್ಪ ಅಜಿಕುರಿ ಶರೀಫ್ ಸಖಾಫಿ ತಿಳಿಸಿದ್ದಾರೆ.

Related posts

ಧರ್ಮಸ್ಥಳ: ಜೋಡುಸ್ಥಾನ ನಿವಾಸಿ ಟೈಲರ್ ಬಿ. ಕೃಷ್ಣ ಮಡಿವಾಳ ನಿಧನ

Suddi Udaya

ಪುಂಜಾಲಕಟ್ಟೆ: ಶಂಕಿತ ರೇಬಿಸ್ ಗೆ ಪ್ರಶಾಂತ್ ಮೃತ್ಯು

Suddi Udaya

ಹತ್ಯಡ್ಕ: ಕೊಡಂಗೆ ನಿವಾಸಿ ಹರಿಹರ ಹೆಬ್ಬಾರ್ ಗೋಖಲೆ ನಿಧನ

Suddi Udaya

ಶಿಶಿಲ: ಮುಚ್ಚಿರಡ್ಕ ನಿವಾಸಿ ನೀಲಮ್ಮ ನಿಧನ

Suddi Udaya

ಕೊಯ್ಯೂರು: ಕೋರಿಯಾರು ವಾತ್ಸಲ್ಯ ಮನೆಯ ಗೋಪಾಲಕೃಷ್ಣ ಶರ್ಮ ನಿಧನ

Suddi Udaya

ಗೇರುಕಟ್ಟೆ: ರಿಕ್ಷಾ ಚಾಲಕ ಎಂ.ಕೆ. ಶರೀಪುದ್ದೀನ್ ನಿಧನ

Suddi Udaya
error: Content is protected !!