November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ದೇವಿರಮ್ಮನ ಬೆಟ್ಟ ಹತ್ತುವ ವೇಳೆ ಕನ್ಯಾಡಿ ಗ್ರಾಮದ ಯುವಕ ಹೃದಯಾಘಾತದಿಂದ ಸಾವು

ಬೆಳ್ತಂಗಡಿ: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ದೇವಿರಮ್ಮನ ಬೆಟ್ಟದಲ್ಲಿ ಭಕ್ತರ ಸಂಭ್ರಮದ ನಡುವೆ ದುರಂತವೊಂದು ಸಂಭವಿಸಿದೆ. ದೇವಿಯ ದರ್ಶನ ಪಡೆಯಲು ಬೆಟ್ಟ ಏರುತ್ತಿದ್ದ ಧರ್ಮಸ್ಥಳ ಸಮೀಪದ ಕನ್ಯಾಡಿ ಗ್ರಾಮದ ಲಕ್ಷ್ಮಣ್(32 ವ) ಎಂಬ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಂದು ದೇವಿರಮ್ಮನ ದರ್ಶನಕ್ಕೆ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬೆಟ್ಟದತ್ತ ಆಗಮಿಸುತ್ತಿದ್ದಾರೆ. ಈ ನಡುವೆ ದೇವಿಯ ದರ್ಶನ ಪಡೆಯುವ ಉದ್ದೇಶದಿಂದ ಕಠಿಣವಾದ ಬೆಟ್ಟವನ್ನು ಏರುತ್ತಿದ್ದ ಲಕ್ಷ್ಮಣ್ ಅವರಿಗೆ ಮಾರ್ಗಮಧ್ಯೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದ ಪರಿಣಾಮ ಅವರು ಬೆಟ್ಟ ಏರುತ್ತಿದ್ದಾಗಲೇ ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ದೇವಿಯ ದರ್ಶನ ಪಡೆಯುವ ಭಕ್ತಿಯಿಂದ ಬೆಟ್ಟ ಏರಿದ್ದ ಯುವಕನ ಅಕಾಲಿಕ ಸಾವು ಭಕ್ತರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.

Related posts

ಚಾರ್ಮಾಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ನಾಳೆ (ಫೆ.8) : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬೆಳ್ತಂಗಡಿಗೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ : ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನೆರಿಯ: ಆಲಂಗಾಯಿ ನಿವಾಸಿ ಕೋಟಿಯಪ್ಪ ಮಲೆಕುಡಿಯ ನಿಧನ

Suddi Udaya

ಧರ್ಮಸ್ಥಳ ಶ್ರೀ ಧ . ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯ ಹಾಗೂ ಸಂಗೀತ ಉದ್ಘಾಟನೆ ಸಮಾರಂಭ

Suddi Udaya

ಬಾಂಗ್ಲಾ ಹಿಂದು ಗಳಿಗಾಗಿರುವ ದೌರ್ಜನ್ಯದ ವಿರುದ್ಧ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ ಮೂಲಕ ಪ್ರತಿಭಟನೆ

Suddi Udaya
error: Content is protected !!