24.1 C
ಪುತ್ತೂರು, ಬೆಳ್ತಂಗಡಿ
September 6, 2026
Uncategorized

ನಿಡಿಗಲ್ ಹಳೆ ಸೇತುವೆ ಪರಿಸರದಲ್ಲಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ: ದಂಡ ವಸೂಲಿ

ಮುಂಡಾಜೆ: ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ದಂಡವನ್ನು ವಸೂಲಿ ಮಾಡಿದ ಘಟನೆ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ಮುಂಡಾಜೆ ಗ್ರಾಪಂ ವ್ಯಾಪ್ತಿಯ ನಿಡಿಗಲ್ ಹಳೆ ಸೇತುವೆ ಪರಿಸರದಲ್ಲಿ ಕಸವನ್ನು ತಂದು ಹಾಕಲಾಗಿತ್ತು.ಈ ಕಸದಲ್ಲಿ ಸಿಕ್ಕ ಕೆಲವು ಪತ್ರ,ದಾಖಲೆ ಇತ್ಯಾದಿಗಳನ್ನು ಪರಿಶೀಲಿಸಿದಾಗ ಇದು ಕಕ್ಕಿಂಜೆ ಕಡೆಯ ವ್ಯಕ್ತಿಗಳು ತಂದು ಹಾಕಿರುವುದಕ್ಕೆ ಪುರಾವೆ ಸಿಕ್ಕಿತ್ತು. ಹಾಗೂ ಈ ದೃಶ್ಯ ಇತ್ತೀಚೆಗೆ ಸೇತುವೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.ಕಸ ಸುರಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಕರೆಯಿಸಿ ಅವರಿಂದಲೇ ವಿಲೇವಾರಿ ಮಾಡಿಸಿ ಪಂಚಾಯಿತಿ ವತಿಯಿಂದ 2000 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಹಾಗೂ ಪಿಡಿಒ ಗಾಯತ್ರಿ ಪಿ. ತಿಳಿಸಿದ್ದಾರೆ.

ಮುಂಡಾಜೆ ಹಾಗೂ ಕಲ್ಮಂಜ ಗ್ರಾಮ ಪಂಚಾಯಿತಿಗೆ ಸೇರಿದ ಇಲ್ಲಿನ ಹಳೆ ಮತ್ತು ಹೊಸ ಸೇತುವೆ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಕಸ ಸಂಗ್ರಹವಾಗಿದ್ದು ಅದು ನದಿ ನೀರು ಆತಂಕ ವ್ಯಕ್ತವಾಗಿತ್ತು. ಗ್ರಾಮಸಭೆಯಲ್ಲೂ ಈ ವಿಚಾರ ಭಾರಿ ಚರ್ಚೆಗೊಳಗಾಗಿತ್ತು. ಬಳಿಕ ಕಳೆದ ವಾರ ಇಲ್ಲಿ ಸ್ವಚ್ಛತೆ ಕಾರ್ಯವನ್ನು 2 ಪಂಚಾಯಿತಿಗಳ ವತಿಗಳಿಂದ ನಿರ್ವಹಿಸಿ ಸೇತುವೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

Related posts

ತೀರ ಬಡತನದ ಕುಟುಂಬಕ್ಕೆ ಸಹಾಯಹಸ್ತ ನೀಡಿದ ಧಾರ್ಮಿಕ ಮುಖಂಡ ಪುಷ್ಪಗಿರಿ

Suddi Udaya

ಮುಂಡಾಜೆ: ತಾಲೂಕು ಮಟ್ಟದ ಕೇರಂ ಪಂದ್ಯಾಟ: ವಿಜೇತರಿಗೆ ಬಹುಮಾನ

Suddi Udaya

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ಆಯೋಜಿಸಿದ್ದ ‘ಏಕತ್ವಮ್’ ಅಂತರ್ ತರಗತಿ ಫೆಸ್ಟ್ ನ ಸಮಾರೋಪ ಸಮಾರಂಭ

Suddi Udaya

ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರಾಗಿ ಅಮಿತಾ ಅಶೋಕ್

Suddi Udaya

ಮಡಂತ್ಯಾರು ವಲಯದ ಮಚ್ಚಿನ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕಡಿರುದ್ಯಾವರ: ವಿದ್ಯುತ್ ತಂತಿಯಲ್ಲಿ ಕಾಣಿಸಿಕೊಂಡ ಬೆಂಕಿ

Suddi Udaya
error: Content is protected !!