
ಮಡಂತ್ಯಾರು: ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತೀಯ ಅಭ್ಯರ್ಥಿಗಳು 9 ಸ್ಥಾನಗಳನ್ನು ಪಡೆದು ಬಹುಮತದೊಂದಿಗೆ ಸೊಸೈಟಿಯ ಅಧಿಕಾರವನ್ನು ಪಡೆದುಕೊಂಡ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿ, ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಚುನಾವಣಾ ಪ್ರಭಾರಿ ಪದ್ಮನಾಭ ಅರ್ಕಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೋಯೇಲ್ ಮೆಂಡೋನ್ಸಾ ಹಾಗೂ ಉಪಾಧ್ಯಕ್ಷರಾದ ಕಾಂತಪ್ಪ ಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಶ್ರಮದಿಂದ ಸಹಕಾರಿ ಭಾರತೀಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಂದೆ ಈ ಸೊಸೈಟಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವುದರೊಂದಿಗೆ, ಕೃಷಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾರವರು ಮಾತನಾಡಿ ಚುನಾವಣೆ ಪ್ರಾರಂಭದಿಂದ ಇಂದಿನವರೆಗೆ ಕಾರ್ಯಕರ್ತರ ಶ್ರಮವನ್ನು ಗೌರವಿಸುತ್ತೇನೆ. ಕಾರ್ಯಕರ್ತರಿಂದ ಪಕ್ಷ ಎಂಬುದಕ್ಕೆ ಮಡಂತ್ಯಾರು ಸಿಎ ಬ್ಯಾಂಕಿನ ಚುನಾವಣೆ ಉದಾಹರಣೆ. ರೈತಾಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಅಮಿತಾ, ಪ್ರೀಯಾ, ಮಹಾಬಲ, ಸುರೇಶ್ ಎಸ್, ಗೋಪಾಲಕೃಷ್ಣ, ಗಣೇಶ್ ಮೂಲ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಪ್ರಮುಖರಾದ ಸದಾನಂದ ಪೂಜಾರಿ ಉಂಗೀಲಬೈಲು, ಶೈಲೇಶ್ ಪುಲಿಮಜಲು, ಜಯಂತ್ ಗೌಡ ಗುರಿಪಲ್ಲ, ವಿಶ್ವನಾಥ ಪೂಜಾರಿ ಹಾರಬೆ, ನಂದ ಕುಮಾರ್, ದಿನೇಶ್ ಕರ್ಕೇರ ಸೋಣಂದೂರು, ರತ್ನಾಕರ ಶೆಟ್ಟಿ ಸೋಣಂದೂರು, ಹಂಸರಾಜ್ ಬುಣ್ಣಾಲ್, ಧರ್ಣಪ್ಪ ಗೌಡ, ವಸಂತಿ ಲಕ್ಷ್ಮಣ ಮಚ್ಚಿನ, ಬೇಬಿ ಸುಸಾನ, ರಾಜೇಶ್ ಕೊಡಿಯೂರು, ಪುರುಷೋತ್ತಮ ಶೆಟ್ಟಿ ಸೋಣಂದೂರು, ಲ್ಯಾನ್ಸಿ ಪಿಂಟೋ ಮಡಂತ್ಯಾರು, ಪ್ರಾನ್ಸಿಸ್ ವಿ.ವಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.