25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ, ಅಧಿಕಾರದ ಗದ್ದುಗೆಗೇರಿದ ಬಿಜೆಪಿ: ನೂತನ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾ,ಉಪಾಧ್ಯಕ್ಷ ಕಾಂತಪ್ಪ ಗೌಡ ಹಾಗೂ ನಿರ್ದೇಶಕರನ್ನು ಅಭಿನಂದಿಸಿದ ಬಿಜೆಪಿ ಕಾರ್ಯಕರ್ತರು

ಮಡಂತ್ಯಾರು: ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತೀಯ ಅಭ್ಯರ್ಥಿಗಳು 9 ಸ್ಥಾನಗಳನ್ನು ಪಡೆದು ಬಹುಮತದೊಂದಿಗೆ ಸೊಸೈಟಿಯ ಅಧಿಕಾರವನ್ನು ಪಡೆದುಕೊಂಡ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿ, ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಚುನಾವಣಾ ಪ್ರಭಾರಿ ಪದ್ಮನಾಭ ಅರ್ಕಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೋಯೇಲ್ ಮೆಂಡೋನ್ಸಾ ಹಾಗೂ ಉಪಾಧ್ಯಕ್ಷರಾದ ಕಾಂತಪ್ಪ ಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಶ್ರಮದಿಂದ ಸಹಕಾರಿ ಭಾರತೀಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಂದೆ ಈ ಸೊಸೈಟಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವುದರೊಂದಿಗೆ, ಕೃಷಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾರವರು ಮಾತನಾಡಿ ಚುನಾವಣೆ ಪ್ರಾರಂಭದಿಂದ ಇಂದಿನವರೆಗೆ ಕಾರ್ಯಕರ್ತರ ಶ್ರಮವನ್ನು ಗೌರವಿಸುತ್ತೇನೆ. ಕಾರ್ಯಕರ್ತರಿಂದ ಪಕ್ಷ ಎಂಬುದಕ್ಕೆ ಮಡಂತ್ಯಾರು ಸಿಎ ಬ್ಯಾಂಕಿನ ಚುನಾವಣೆ ಉದಾಹರಣೆ. ರೈತಾಪಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನೂತನ‌ ನಿರ್ದೇಶಕರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಅಮಿತಾ, ಪ್ರೀಯಾ, ಮಹಾಬಲ, ಸುರೇಶ್ ಎಸ್, ಗೋಪಾಲಕೃಷ್ಣ, ಗಣೇಶ್ ಮೂಲ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಪ್ರಮುಖರಾದ ಸದಾನಂದ ಪೂಜಾರಿ ಉಂಗೀಲಬೈಲು, ಶೈಲೇಶ್ ಪುಲಿಮಜಲು, ಜಯಂತ್ ಗೌಡ ಗುರಿಪಲ್ಲ, ವಿಶ್ವನಾಥ ಪೂಜಾರಿ ಹಾರಬೆ, ನಂದ ಕುಮಾರ್, ದಿನೇಶ್ ಕರ್ಕೇರ ಸೋಣಂದೂರು, ರತ್ನಾಕರ ಶೆಟ್ಟಿ ಸೋಣಂದೂರು, ಹಂಸರಾಜ್ ಬುಣ್ಣಾಲ್, ಧರ್ಣಪ್ಪ ಗೌಡ, ವಸಂತಿ ಲಕ್ಷ್ಮಣ ಮಚ್ಚಿನ, ಬೇಬಿ ಸುಸಾನ, ರಾಜೇಶ್ ಕೊಡಿಯೂರು, ಪುರುಷೋತ್ತಮ ಶೆಟ್ಟಿ ಸೋಣಂದೂರು, ಲ್ಯಾನ್ಸಿ ಪಿಂಟೋ ಮಡಂತ್ಯಾರು, ಪ್ರಾನ್ಸಿಸ್ ವಿ.ವಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಉದ್ಘಾಟನೆ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು: ಅರಣ್ಯ ಸಂಚಾರಿ ದಳದಿಂದ ದಾಳಿ

Suddi Udaya

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಉಜಿರೆಯಿಂದ ಸೋಮಂತಡ್ಕ ಪ್ರಯಾಣ ಸಂದರ್ಭ ಕಳೆದು ಹೋದ ರೂ.2. 80 ಲಕ್ಷ ಹಣವಿದ್ದ ಬ್ಯಾಗ್: ಕೊರಗಜ್ಜನ ಮೊರೆ ಹೋದ ಬ್ಯಾಗ್ ಕಳೆದು ಕೊಂಡ‌ ಲತೇಶ್ ಉಜಿರೆ

Suddi Udaya
error: Content is protected !!