ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ “ವಿಜಯ ಗೋಪುರ” ದ ದೇಣಿಗೆ ಸಂಗ್ರಹ ಹಾಗು ಮಾಹಿತಿ ಕಾರ್ಯಾಲಯವನ್ನು ಮಾ 4 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳವರು ಶ್ರೀ ದೇವರಲ್ಲಿ ಪ್ರಾರ್ಥಿಸಿ, ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಕೋರಿದರು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ , ರಾಜಗೋಪುರ ನಿರ್ಮಾಣ ಸಮಿತಿ ಉಪಾಧ್ಯಕ್ಷ ಮೋಹನ ಶೆಟ್ಟಿಗಾರ್, ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ ಉಪಸ್ಥಿತರಿದ್ದರು.


ಉಜಿರೆಯ ಗಣ್ಯರು, ವರ್ತಕರು, ಹಾಗು ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ಬೈಪಾಡಿತ್ತಾಯ, ಪ್ರಶಾಂತ್ ಜೈನ್, ರಾಮಚಂದ್ರ ಶೆಟ್ಟಿ, ಮಂಜುನಾಥ ಕಾಮತ್, ಭರತ್ ಕುಮಾರ್ ,ವನಿತಾ ವಿ ಶೆಟ್ಟಿ,ವಿಶ್ವನಾಥ ಶೆಟ್ಟಿ, ಸಂಜೀವ ಕೆ., ಬಾಲಕೃಷ್ಣ ಶೆಟ್ಟಿ, ರಾಮಯ್ಯ ಗೌಡ, ರವಿ ಚೆಕ್ಕಿತ್ತಾಯ, ಶಿವರಾಮ ಬಿ.ಕೆ, ರಮೇಶ್ ಶೆಟ್ಟಿ, ಪಾಂಡುರಂಗ ಬಾಳಿಗಾ, ಅನಂತಕೃಷ್ಣ ಪಡುವೆಟ್ನಾಯ,ಪ್ರವೀಣ್, ಸತ್ಯನಾರಾಯಣ ಎರ್ಕಾ ಡಿತ್ತಾಯ, ಗಾಯತ್ರಿ ಶ್ರೀಧರ್, ಶಶಿಕಲಾ,ದೇವಪ್ಪ ಗೌಡ, ಪರಾರಿ ವೆಂಕಟ್ರಮಣ ಹೆಬ್ಬಾರ್, ಜಗದೀಶ್ ಪ್ರಸಾದ್,ಪುಷ್ಪಾವತಿ ಆರ್ ಶೆಟ್ಟಿ, ಪ್ರಕಾಶ್ ಪೆಜತ್ತಾಯ, ಪ್ರಕಾಶ್ ಕುದ್ದಣ್ಣಾಯ ಮೊದಲಾದವರು ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಹಲವು ಭಕ್ತಾದಿಗಳು ತಮ್ಮ ಮೊದಲ ಕಂತಿನ ದೇಣಿಗೆಯನ್ನು ಪಾವತಿಸಿ ರಶೀದಿ ಪಡೆದರು.

ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ ,ಪ್ರಸ್ತಾವಿಸಿ ಭಕ್ತಾದಿಗಳು ವಿಜಯಗೋಪುರ ನಿರ್ಮಾಣಕ್ಕೆ ನೀಡುವ ದೇಣಿಗೆಗೆ 8೦ ಜಿ ಯನ್ವಯ ಆದಾಯ ತೆರಿಗೆಯಿಂದ ವಿನಾಯಿತಿಯಿರುತ್ತದೆ ಎಂದು ತಿಳಿಸಿ ಭಕ್ತಾದಿ ದಾನಿಗಳ ಪೂರ್ಣ ಸಹಕಾರ ಕೋರಿದರು. ರವೀಂದ್ರ ಶೆಟ್ಟಿ ಬಳಂಜ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.