ಬೆಳ್ತಂಗಡಿ: ಬಿ-ಖಾತೆಯಿಂದ ಸರಕಾರಕ್ಕೆ ತೆರಿಗೆ ಬರುತ್ತಿದೆ ಹೊರತು ಮನೆ ಕಟ್ಟಲು ಪರವಾನಿಗೆ, ಬ್ಯಾಂಕ್ ಸಾಲ ಪಡೆಯಲು, ಜಾಗ ಮಾರಾಟ ಮಾಡಲು ಬಿ-ಖಾತೆಯಿಂದ ಪ್ರಯೋಜನವಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು. ರಾಜ್ಯದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಬಿ-ಖಾತೆಯಿಂದ ಆಗುತ್ತಿರುವ ತೊಂದರೆ ಕುರಿತು ವಿಷಯ ಪ್ರಸ್ತಾಪಿಸಿದರು.
ಮೂಡದಲ್ಲಿ ಸಿಬ್ಬಂದಿಗಳು ಇಲ್ಲ. ವಿನ್ಯಾಸ ನಕ್ಷೆ ನೀಡಿದರೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲು ಆಗುತ್ತದೆ. ಬೆಂಗಳೂರನ್ನು ಇಟ್ಟಕೊಂಡು ರಾಜ್ಯವನ್ನು ತುಲಣೆ ಮಾಡುವುದು ಬೇಡ. ಗ್ರಾಮದಲ್ಲಿ ಕಂದಾಯ ಇಲಾಖೆ ಕರ್ನ್ವ್ಷನ್ ಮಾಡಿರುವ ಜಾಗ. ಮನೆ ಕಟ್ಟಿರುವ ಜಾಗಗಳಿಗೆ ಫಾರ್ಮ-3ಎ ನೀಡಿ. ಈಗ ಡೋರ್ ನಂಬ್ರ ಸಿಕ್ಕಿದೆ ಸರಕಾರಕ್ಕೆ ತೆರಿಗೆ ಸಿಕ್ಕಿದೆ ಇದರಿಂದ ಏನು ಪ್ರಯೋಜನ. ಬೆಂಗಳೂರಿನಲ್ಲಿ ನಡೆಯುವ ಅವಾಂತರಗಳಿಗೆ ಗ್ರಾಮೀಣ ಪ್ರದೇಶದ ಸಣ್ಣ ಸೈಟ್‌ಗಳಿಗೆ ಅನ್ವಯ ಮಾಡಬೇಡಿ. ಅಂತವರಿಗೆ ವಿಶೇಷ ರಿಯಾಯಿತಿ ನೀಡಿ. ಫಾರ್ಮ್ ನಂಬ್ರ-3 ನೀಡಿ ಎಂದು ಒತ್ತಾಯಿಸಿದ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಈ ಬಗ್ಗೆ ಗಮನಹರಿಸಲಾಗುವುದು. ಎಲ್ಲ ಜನರ ಸಮಸ್ಯೆ ಬಗೆಹರಿಯಬೇಕು. ಸಲಹೆಯನ್ನು ಸ್ವೀಕರಿಸಲಾಗುವುದು ಎಂದು ಪೌರಡಳಿತ ಸಚಿವರು ಉತ್ತರಿಸಿದರು.