March 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿ ಪರಿಷ್ಕರಿಸಿ ಆದೇಶ: ಈ ಹಿಂದಿನ ಆದೇಶದಲ್ಲಿದ್ದ ಇಬ್ಬರನ್ನು ಕೈ ಬಿಟ್ಟು ಮತ್ತಿಬ್ಬರ ಸೇರ್ಪಡೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಫೆ.18 ರಂದು ನೂತನ ವ್ಯವಸ್ಥಾಪನ ಸಮಿತಿಯನ್ನು ನೇಮಕಗೊಳಿಸಿ ನೀಡಿದ ಆದೇಶವನ್ನು ಮಾರ್ಪಡಿಸಿ 9 ಮಂದಿಯನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮರು ಆದೇಶ ನೀಡಿದೆ.

ವ್ಯವಸ್ಥಾಪನಾ ಸಮಿತಿಗೆ ನೇಮಕಗೊಂಡ ಸದಸ್ಯರ ವಿವರ: ಪರಿಶಿಷ್ಟ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪರಪಲಿಕೆ ಕೊಕ್ಕಡ, ಮಹಿಳಾ ಸ್ಥಾನದಿಂದ ಸಿನಿ ತಂಡಶೇರಿ ಕೊಕ್ಕಡ, ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿ ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ಎಂತಿಮರ್, ಪ್ರಶಾಂತ್ ಕುಮಾರ್ ಶಾಂತಿಜೆ ಮನೆ ಕೊಕ್ರಾಡಿ ಹಾಗೂ ಪ್ರಧಾನ ಅರ್ಚಕ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಾರೆ.

ಈ ಹಿಂದಿನ ಆದೇಶದಲ್ಲಿದ್ದ ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು ಹಾಗೂ ಉದಯ ಶಂಕರ್ ಶೆಟ್ಟಿ ಅರಿಯಡ್ಕ ಮನೆ ಪುತ್ತೂರು ಇವರನ್ನು ಕೈಬಿಟ್ಟು ಹೊಸ ಆದೇಶದಲ್ಲಿ ಇಬ್ಬರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಮರು ಆದೇಶ ಮಾಡಲಾಗಿದೆ.

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ‘ದೆಸಿಲ್ದರತಿ’ ಶಿಶಿಲೇಶ್ವರ ದೇವರ ಭಕ್ತಿಗೀತೆಯ ಚಿತ್ರೀಕರಣ

Suddi Udaya

ಬೆಳ್ತಂಗಡಿ ಆಡಳಿತ ಸೌಧದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ನ.4: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಾಲೆಗಳಿಗೆ ಪೀಠೋಪಕರಣಗಳ ಸಾಗಾಟ ವಾಹನಗಳ ಚಾಲನೆ

Suddi Udaya

ಗುರುವಾಯನಕೆರೆ ಗೆಳೆಯರ ಬಳಗ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪಿಲ್ಯ: ಎರಡು ಕಾರುಗಳ ನಡುವೆ ಅಪಘಾತ: ಮಗು ಸೇರಿದಂತೆ ನಾಲ್ವರಿಗೆ ಗಾಯ

Suddi Udaya
error: Content is protected !!