March 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮ ಸಭೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್‌ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಮಾ.4 ರಂದು ಗ್ರಾ.ಪಂ. ಅಧ್ಯಕ್ಷೆ ವಿಮಲ ಅವರ ಅಧ್ಯಕ್ಷತೆಯಲ್ಲಿ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಜಗದೀಪ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷ ಪಿ. ಶ್ರೀನಿವಾಸ್ ರಾವ್, ಸದಸ್ಯರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಶು ಮತ್ತು ಕೃಷಿ ಸಖಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಿಬ್ಬಂದಿ ವಂದನಾ ಬಳ್ಳಾಲ್ ವರದಿ ವಾಚಿಸಿದರು. ಲೆಕ್ಕ ಸಹಾಯಕಿ ಪ್ರಮಿಳಾ ಅನುಪಾಲನಾ ವರದಿ ಮಂಡಿಸಿದರು. ಪಿಡಿಓ ದಿನೇಶ್ ಸ್ವಾಗತಿಸಿ, ಡಾ.ದೇವಿ ಪ್ರಸಾದ್ ಬೊಲ್ಮ ಕಳೆದ ಗ್ರಾಮ ಸಭೆಯ ನಡಾವಳಿ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು.

Related posts

ಗುರುವಾಯನಕೆರೆ ಶಕ್ತಿ ನಗರದ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಓರ್ವ ಸಾವು, ಇಬ್ಬರು ಗಂಭೀರ ಗಾಯ

Suddi Udaya

ಕಳೆಂಜ ಗ್ರಾಮದ ಕಾಯ೯ತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆ

Suddi Udaya

ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಜಾತಿ ನಿಂದನೆ, ಹಲ್ಲೆ ಪ್ರಕರಣ : ಆರೋಪಿ ಕರುಣಾಕರ ಗೌಡನಿಗೆ ನ್ಯಾಯಾಂಗ ಬಂಧನ

Suddi Udaya

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya

ಶಿಬಾಜೆ: ಪೆರ್ಲ ಸುಮತಿ ಹೆಬ್ಬಾರ್ ನಿಧನ

Suddi Udaya

ಅ.3 -13: ಉಪ್ಪಿನಂಗಡಿ ಸವಿ ಫೂಟ್ ವೆರ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Suddi Udaya
error: Content is protected !!