ಸುಲ್ಕೇರಿ ಗ್ರಾಮ ಪಂಚಾಯತ್ ನ ನೂತನ ಸಭಾಂಗಣದಲ್ಲಿ 2024- 25ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮಸಭೆಯನ್ನು ಮಾ.04 ರಂದು ಗ್ರಾಮ ಪಂಚಾಯತ್ ನ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಾಯತ್ರಿ. ಪಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. 2024 – 25ನೇ ಸಾಲಿನ ವಿಶೇಷಚೇತನರ ಕುರಿತಾದ ವಾರ್ಷಿಕ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಕು.ಸುಪ್ರಿಯ ವಾಚಿಸಿದರು.
ವಿಶೇಷಚೇತನರ ಸಮನ್ವಯ ಗ್ರಾಮಸಭೆಯಲ್ಲಿ ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಲ್ಕೇರಿ, ಕುದ್ಯಾಡಿ, ನಾವರ ಗ್ರಾಮಗಳ ವೀಶೇಷಚೇತನರು ಹಾಜರಿದ್ದರು.
ಸಭೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಕು.ಸುಪ್ರಿಯ ಇವರು ವಿಶೇಷಚೇತನರಿಗೆ ಸರಕಾರದಿಂದ ಹಾಗೂ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಗಾಯತ್ರಿ. ಪಿ ಇವರು ಗ್ರಾಮ ಪಂಚಾಯತ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಕು.ಸುಪ್ರಿಯ ನಿರೂಪಿಸಿ , ಸ್ವಾಗತಿಸಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯ ಶ್ರೀಮತಿ ಗಾಯತ್ರಿ. ಪಿ ಧನ್ಯವಾದವಿತ್ತರು.