September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಛಂದಸ್ಸು: ಪರಿಚಯಾತ್ಮಕ ಕಾರ್ಯಗಾರ

ಪಟ್ಟೂರು: ಕನ್ನಡ ಭಾಷೆಯಲ್ಲಿ ಪದ್ಯಗಳನ್ನು ರಚಿಸುವಾಗ ಅದರದೇ ಆದ ಕೆಲವು ನಿಯಮಗಳಿದ್ದು, ಪದ್ಯದ ರಚನಾ ನಿಯಮಗಳನ್ನು ತಿಳಿಸುವ ಶಾಸ್ತ್ರ ಛಂದಸ್ಸಾಗಿದೆ. ವಿದ್ಯಾರ್ಥಿಗಳು ಪದ್ಯವನ್ನು ರಚಿಸುವಾಗ ಛಂದಸ್ಸಿನಲ್ಲಿ ಬರುವಂತಹ ಪ್ರಾಸಗಳು, ಗಣಗಳು ಸೇರಿದಂತೆ ಇತರ ವಿಚಾರಗಳನ್ನು ಅಳವಡಿಸಿಕೊಂಡಾಗ ಅಂತಹ ಪದ್ಯಗಳು ವಿಶೇಷ ಮಹತ್ವವನ್ನು ಪಡೆಯುತ್ತವೆ ಎಂದು ಪಟ್ಟೂರಿನ ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ನುಡಿದರು.


ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಛಂದಸ್ಸು: ಪರಿಚಯಾತ್ಮಕ ವಿವರ ಎಂಬ ಎಂಬ ವಿಷಯದ ಕುರಿತು ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಭಿನ್ನ ತರಗತಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಗಾರಗಳ ಮೂಲಕ ಬೋಧಿಸಿದರೆ ಮಕ್ಕಳು ಅದನ್ನು ಬೇಗನೆ ಕಲಿತುಕೊಳ್ಳುತ್ತಾರೆ ಎಂದರು.


ಕನ್ನಡ ವಿಭಾಗದ ಶಿಕ್ಷಕಿ ಸುಪ್ರೀತಾ ಎ. ಮತ್ತು ಸ್ವಾತಿ ಕೆ.ವಿ. ವಿದ್ಯಾರ್ಥಿಗಳಿಗೆ ಛಂದಸ್ಸು, ಮಾತ್ರಗಣ ಹಾಗೂ ಕಂದ ಪದ್ಯಗಳ ಬಗ್ಗೆ ಚಟುವಟಿಕೆ ಮೂಲಕ ಕಾರ್ಯಗಾರವನ್ನು ನಡೆಸಿಕೊಟ್ಟರು.
ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡರು.

Related posts

ಸುರ್ಯ ದೇವಸ್ಥಾನದ ವಠಾರದಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ದೇವಿಕಿರಣ್ ಕಲಾನಿಕೇತನ ಸಂಸ್ಥೆಗೆ ಭರತನಾಟ್ಯ ಜೂನಿಯರ್ ಹಾಗೂ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಲಾಯಿಲ: ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದಿಂದ ಶ್ರೀ ಶನೇಶ್ವರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಾಚಾರು ಗೋಪಾಲ ನಾಯ್ಕ ಅವರ ನಿಧನಕ್ಕೆ ದ.ಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ರವರಿಂದ ಸಂತಾಪ

Suddi Udaya

ಬೆಳಾಲು: ಅನ್ಸಾರಿಯ ಜುಮಾ ಮಸೀದಿಯಲ್ಲಿ ಈದ್ ಸಂಭ್ರಮ

Suddi Udaya

ಆ 31: ಬೆಳ್ತಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಗುರುಜಯಂತಿ: ಸಮಾಜದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ

Suddi Udaya
error: Content is protected !!