September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಡಿಎಫ್ ಓ, ಎನ್.ಪದ್ಮನಾಭ ಮಾಣಿಂಜ ವಿಧಿವಶ

ಬೆಳ್ತಂಗಡಿ: ಕುಕ್ಕಿನಡ್ಡ ಕುಟುಂಬ ಮನೆತನದ ಹಿರಿಯ ತಲೆ, ನಿವೃತ್ತ ಡಿಎಫ್ ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಾ.6ರಂದು ಬೆಳಿಗ್ಗೆ ವಿಧಿವಶರಾದರು.

ಮಾಜಿ ಶಾಸಕ ಕೆ.ವಸಂತ ಬಂಗೇರರೊಂದಿಗೆ ಉತ್ತಮ ಸಂಬಂಧ ಹೊಂದಿದ ಇವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆ ಪದ್ಮನಾಭ ಮಾಣಿಂಜರವರ ದೂರದೃಷ್ಟಿ ಚಿಂತನೆ ಮಹತ್ತರವಾದದು.

ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ, ನೇರ ನಿಷ್ಟುರವಾದಿ ವ್ಯಕ್ತಿತ್ವವನ್ನು ಹೊಂದಿದ್ದ ಇವರು ಪತ್ನಿ ಇಂದಿರಾ, ಪುತ್ರರಾದ ಸೂರಜ್, ಸುಧೀರ್, ಸುಜಿತ್, ಸೊಸೆಯಂದಿರಾದ ಸ್ನೇಹ, ಟೀನಾ, ದಿವ್ಯ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪದ್ಮನಾಭ ಮಾಣಿಂಜ ರವರ ಪಾರ್ಥೀವ ಶರೀರದ ಅಂತಿಮ ದರ್ಶನ 12 ಗಂಟೆಯ ತನಕ ಬಲ್ಮಠದ “ಇಂದುಪದ್ಮ” ನಿವಾಸದಲ್ಲಿ ನಡೆಯಲಿದ್ದು, ತದನಂತರ ಪುಂಜಾಲಕಟ್ಟೆ ಮಾಣಿಂಜದ ಸ್ವಗೃಹದಲ್ಲಿ 4 ಗಂಟೆಯ ತನಕ ಅಂತಿಮ ದರ್ಶನ ನಡೆದು ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

Related posts

ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಜೂನಿಯರ್ ತ್ರೋಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆ

Suddi Udaya

ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪ.ಜಾತಿ/ಪ.ಪಂಗಡದ ಫಲಾನುಭವಿಗಳಿಗೆ ಫ್ಯಾನ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಚಯರ್ ವಿತರಣೆ

Suddi Udaya

ಕಲ್ಮಂಜ 88 ನೇ ವಾರ್ಡಿನ ಬಿಜೆಪಿ ಪದಾಧಿಕಾರಿಗಳ ಆಯ್ಕೆ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನಕ್ಕೆ ಹೈ ಮಾಸ್ಕ್ ದೀಪದ ಕೊಡುಗೆ ನೀಡಿದ ವಿಧಾನ ಪರಿಷತ್ತು ಶಾಸಕ ಪ್ರತಾಪ್ ಸಿಂಹ ನಾಯಕ್

Suddi Udaya

ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಧಾರ್ಮಿಕ ಸಂವಾದ ಕಾರ್ಯಕ್ರಮ

Suddi Udaya
error: Content is protected !!