September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಅಧ್ಯಕ್ಷರಾಗಿ ಯುವ ಸಂಘಟಕ ಪ್ರಕಾಶ್ ನಾರಾಯಣ್ ರಾವ್, ಉಪಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ರಾಘವ ಗೌಡ ಕುಡುಮಡ್ಕ ಆಯ್ಕೆ

ಮುಂಡಾಜೆ:ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನವನ್ನು ಗಳಿಸಿ ಅಧಿಕಾರವನ್ನು ಪಡೆದುಕೊಂಡಿದೆ.ಪಕ್ಷೇತರ ಒಂದು ಸ್ಥಾನವನ್ನು ಗಳಿಸಿಕೊಂಡಿದ್ದು,ಕಾಂಗ್ರೇಸ್ ಒಂದು ಸ್ಥಾನವನ್ನು ಪಡೆಯುವಲ್ಲಿ ವಿಫಲವಾಗಿದೆ.

ಆಡಳಿತ ಮಂಡಳಿಯ ನೂತನ‌ ಆಡಳಿತ ಮಂಡಳಿಗೆ ಸೊಸೈಟಿಯ ಕಳೆದ ಅವಧಿಯ ಉಪಾಧ್ಯಕ್ಷ ,ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಘಟಕ,ಯುವ ನಾಯಕ ಪ್ರಕಾಶ್ ನಾರಾಯಣ್ ರಾವ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಹಾಗೂ ಉಪಾಧ್ಯಕ್ಷರಾಗಿ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ,ಪ್ರಗತಿಪರ ಕೃಷಿಕ ರಾಘವ ಗೌಡ ಕುಡುಮಡ್ಕ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಕಜೆ ವೆಂಕಟೇಶ್ವರ ಭಟ್,ಅಜಯ್ ನೆರಿಯ, ಶಶಿಧರ್ ಕಲ್ಮಂಜ, ರಾಘವ ಕಲ್ಮಂಜ,ಚೆನ್ನಕೇಶವ ಅರಸಮಜಲು, ರವಿ ಪೂಜಾರಿ ಚಾರ್ಮಾಡಿ,ಶಿವಪ್ರಸಾದ್ ಗೌಡ ತೋಟತ್ತಾಡಿ,ಶ್ರೀಮತಿ ಅಶ್ವಿನಿ ಹೆಬ್ಬಾರ್ ಮುಂಡಾಜೆ, ಶ್ರೀಮತಿ ಮೋಹಿನಿ ಓಬಯ್ಯ ಗೌಡ ತೋಟತ್ತಾಡಿ,ಸುಮನ ಗೋಖಲೆ ಮುಂಡಾಜೆ ಆಯ್ಕೆಯಾದರು.

ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ ಗಳಿಸಿ ಅಧಿಕಾರದ ಗದ್ದುಗೆಗೆ ಏರಿದ್ದಾರೆ.ಪಕ್ಷೇತರ 1 ಸ್ಥಾನ ಅಲಂಕರಿಸಿದ್ದಾರೆ.ಜ.19ರಂದು ಚುನಾವಣೆ ನಡೆದಿದ್ದು,5ರ ಪೈಕಿ2 ಮಹಾಸಭೆಗಳಲ್ಲಿ ಭಾಗವಹಿಸದ ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲು ಹತ್ತಿ ಮತದಾನ ಮಾಡಿದ ಕಾರಣ ಅದರ ತೀರ್ಪು ಇತ್ತೀಚೆಗಷ್ಟೆ ಬಂದಿದ್ದು ಬಳಿಕ ಅಧಿಕೃತ ಫಲಿತಾಂಶ ಘೋಷಣೆಯಾಗಿತ್ತು.ಸಿಡಿಓ ಪ್ರತಿಮಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ,ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಪ್ರಭು,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೋಟ್ಯಾನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ನೂತನವಾಗಿ ರಚನೆಯಾದ ಆಡಳಿತ ಮಂಡಳಿಯನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತರಾಮ್ ಬೆಳಾಲು, ಚುನಾವಣಾ ಸಂಚಾಲಕ ಕೊರಗಪ್ಪ ಗೌಡ,ಸಹ ಸಂಚಾಲಕಿ ಪೂರ್ಣಿಮಾ, ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ, ಪ್ರಮುಖರಾದ ನಾರಾಯಣ ಫಡ್ಕೆ,ವೆಂಕಟರಾಯ ಆಡೂರು,ಅನಂತ ಭಟ್ ಮಚ್ಚಿಮಲೆ, ಓಬಯ್ಯ ಗೌಡ ತೋಟತ್ತಾಡಿ,ಪ್ರಾನ್ಸಿಸ್ ವಿ.ಡಿ ತೋಟತ್ತಾಡಿ, ತೀಕ್ಷೀತ್ ದಿಡುಪೆ ಅಭಿನಂದಿಸಿದರು.

Related posts

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬೇಡಿ: ಅಭಿನಂದನ್ ಹರೀಶ್ ಕುಮಾರ್

Suddi Udaya

ಕುಂಟಿನಿ ಅಲ್-ಬುಖಾರಿ ಜುಮಾ ಮಸ್ಜಿದ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Suddi Udaya

ಸವಣಾಲು: ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಯುವಕರು; ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ತೆಕ್ಕಾರು ಶ್ರೀ ಕ್ಷೇತ್ರ ದೇವರಗುಡ್ಡೆ ಗೋಪಾಲಕೃಷ್ಣನಿಗೆ ಬ್ರಹ್ಮಕಲಶೋತ್ಸವ

Suddi Udaya

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ವತಿಯಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ

Suddi Udaya
error: Content is protected !!