March 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ರಕ್ಷಿತ್ ಶಿವರಾಂ ಮನವಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸ್ಪಂದನೆ : ಅರಸಿನಮಕ್ಕಿ ಶಾಲೆಗೆ ಶಿಕ್ಷಕರ ನೇಮಕ

ಬೆಳ್ತಂಗಡಿ:ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ ಏಕೈಕ ಶಿಕ್ಷಕರು ಫೆ.28 ರಂದು ಸೇವಾ ನಿವೃತ್ತಿ ಹೊಂದಿದ್ದು,ಶಾಲೆಯಲ್ಲಿದ್ದ ಓರ್ವ ಶಿಕ್ಷಕರು ಇಲ್ಲದೆ ಶಾಲೆ ಮುಚ್ಚುವು ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಾಲೆಯ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಅಶ್ವಮೇಧ ಫ್ರೆಂಡ್ಸ್ ಅಯೋಜನೆ ಮಾಡಿದ ವಾಲಿಬಾಲ್ ಪಂದ್ಯಾಟದ ವೇದಿಕೆಯಲ್ಲಿ ಶಾಲೆಯ ಶಿಕ್ಷಕರ ಕೊರತೆಯ ಬಗ್ಗೆ ಶಾಲೆಯ ಸಂಚಾಲಕರಾದ ವಾಮನ್ ತಾಮನ್ಕರ್ ರವರು ಮತ್ತು ಧರ್ಮರಾಜ್ ಅಡಕ್ಕಾಡಿ ರವರು ಈ ವಿಷಯವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್ ರವರ ಗಮನಕ್ಕೆ ತಂದುಶಾಲೆಗೆ ಶಿಕ್ಷಕರ ನೇಮಕ ಅಗತ್ಯವಾಗಿದ್ದು, ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.

ಮರುದಿನದಿಂದ ಕಾರ್ಯಪ್ರವೃತರಾದ ರಕ್ಷಿತ್ ಶಿವರಾಮ್ ರವರು ತಾಲ್ಲೂಕಿನ ಶಿಕ್ಷಣ ಅಧಿಕಾರಿ, ಜಿಲ್ಲೆಯ ಮತ್ತು ರಾಜ್ಯ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿ ಶಾಲೆಗೆ ಶಿಕ್ಷಕರನ್ನು ನೇಮಿಸಿ ಅವರು ಬಂದು ಶಾಲೆಯಲ್ಲಿ ಅಧಿಕಾರವಹಿಸುವ ತನಕ ಶ್ರಮಿಸಿದರು. ಇದರಿಂದ ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದರು.

Related posts

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಸಹಕಾರ ಭಾರತಿ ಅಭ್ಯರ್ಥಿ ಉಮೇಶ್.ಎಂ.ಕೆ ಅವಿರೋಧವಾಗಿ ಆಯ್ಕೆ

Suddi Udaya

ಅಪಘಾತದಲ್ಲಿ ಗಂಭೀರ ಗಾಯಗೊಂಡ ಕರಾಯದ ಬಾಲಕೃಷ್ಣ ನಾಯ್ಕ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಇಳಂತಿಲ: ವಿದ್ಯುತ್ ಅವಘಡದಿಂದ ಯುವಕ ಸಾವು

Suddi Udaya

ಬೆಳ್ತಂಗಡಿ ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

Suddi Udaya

ಐಟಿ ಪೆಸ್ಟ್ ನಲ್ಲಿ ಶ್ರೀ ಗುರುದೇವ ಕಾಲೇಜು ಸಮಗ್ರ ಚಾಂಪಿಯನ್

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya
error: Content is protected !!