ಗೇರುಕಟ್ಟೆ : ಕಳಿಯ ಗ್ರಾಮದ ರೇಷ್ಮೆ ರೋಡ್ ಮಾವಿನಕಟ್ಟೆ ನಿವಾಸಿ ಕುಮಾರಿ ಸ್ವಾತಿ ಎಂ. ಶೆಟ್ಟಿ.ಯವರಿಗೆ ಬಿ.ಎಡ್ ಕೋರ್ಸ್‌ನಲ್ಲಿ2022-24ನೇ ವರ್ಷದ ಅತ್ಯುತ್ತಮ ಸಾಧನೆಗೆ ಬೆಸ್ಟ್ ಔಟ್ ಗೋಯಿಂಗ್ ಅವಾರ್ಡ್ ಲಭಿಸಿದೆ. ಮಾ.1 ರಂದು ಮಂಗಳೂರು ಪುರಭವನದಲ್ಲಿ ನಡೆದ ಡಾ.ಎಂ.ವಿ. ಶೆಟ್ಟಿ ಕಾಲೇಜು ಪದವಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಮಂಗಳೂರು ಕಾವೂರು ಲೀಲಾವತಿ ಶೆಟ್ಟಿ ಕಾಲೇಜ್‌ನಲ್ಲಿ ೨ನೇ ವರ್ಷದ ಬಿ.ಎಡ್. ಕೋರ್ಸ್ ಮುಗಿಸಿದರು. ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೇರುಕಟ್ಟೆ ಸಂಯುಕ್ತ ಪದವಿ ಫ್ರೌಡ ಶಾಲೆ ಹಾಗೂ ಪುಂಜಾಲಕಟ್ಟೆ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದರು. ಇವರು ಕಳಿಯ ಗ್ರಾಮದ ಮಾವಿನಕಟ್ಟೆ ಶ್ರೀಮತಿ ಭಾಗೀರಥಿ ಮತ್ತು ಮಂಜುನಾಥ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.
