ಗುರುವಾಯನಕೆರೆ: ಕಳೆದ ವರ್ಷ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ಜೀರ್ಣೋದ್ಧಾರಗೊಂಡು ವಿಜೃಂಭಣೆಯಿಂದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನವು ವಿಜೃಂಭಣೆಯಿಂದ ನಡೆದು ಪ್ರಥಮ ವರ್ಷದ ವಾರ್ಷಿಕ ದೈವರಾಜ ಗುಳಿಗ ನೇಮೋತ್ಸವ ಮಾ. 8 ರಂದು ನಡೆಯಲಿದೆ ಎಂದು ವಿಶ್ವೇಶ್ ಕಿಣಿ ತಿಳಿಸಿದ್ದಾರೆ.
ಬೆಳಿಗ್ಗೆ ಕಳಶ ತಂಬಿಲ ಪರ್ವ,ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ದೈವರಾಜ ಗುಳಿಗ ನೇಮೋತ್ಸವ ನಡೆಯಲಿದೆ.ನೇಮೋತ್ಸವಕ್ಕೆ ಸಹಾಯಾರ್ಥವಾಗಿ ಸೀಯಾಳ,ತೆಂಗಿನಕಾಯಿ ಪಾವತಿಸಬಹುದು ಎಂದವರು ತಿಳಿಸಿದರು.