ಬೆಳ್ತಂಗಡಿ: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಲಾಯಿಲ ಇದರ ಅಷ್ಠಬಂಧ ಬ್ರಹ್ಮಕಲಶೋತ್ಸವವು ಏಪ್ರಿಲ್ 20 ರಿಂದ 23ರವರೆಗೆ ಜರಗಲಿದ್ದು, ಇದರ ಪೂರ್ವಭಾವಿ ಸಭೆಯು ಮಾ.9ರಂದು ಸಂಜೆ 4 ಗಂಟೆಗೆ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯಲಿದೆ ಎಂದು ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ತಿಳಿಸಿದ್ದಾರೆ.ವರ್ಷಂಪ್ರತಿ ಹಲವಾರು ಕಾರ್ಯಕ್ರಮಗಳು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುತ್ತ ಬರುತ್ತಿದೆ.ಮುಂದೆ ಬರುವ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಪೂರ್ವಾಭಾವಿ ಸಭೆಯನ್ನು ಕೆರೆಯಲಾಗಿದೆ ಎಂದವರು ತಿಳಿಸಿದರು.