ಮೇಲಂತಬೆಟ್ಟು: ಮೇಲಂತಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಜೀರ್ಣೋದ್ದಾರ ಸಮಿತಿ ಪಾಲೆತ್ತಾಡಿಗುತ್ತು ಇದರ ಸಮಿತಿ ರಚನೆಯ ಸಭೆಯು ಮಾ.2 ರಂದು ಪಾಲೆತ್ತಾಡಿಗುತ್ತು ಮನೆ ಯಲ್ಲಿ ಶ್ರೀಮತಿ ನಾಗಮ್ಮ ಕುಂಜರ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಬಿ.ರಕ್ಷಿತ್ ಶಿವರಾಂ, ಕಿರಣ್ ಚಂದ್ರ ಡಿ. ಪುಷ್ಪಗಿರಿ ಉದ್ಯಮಿಗಳು ಬೆಂಗಳೂರು, ಯೋಗೀಶ್ ಕುಮಾರ್ ನಡಕ್ಕರ, ಜಯಂತ್ ಪೂಜಾರಿ ಆಯ್ಕೆಯಾದರು.
ಅಧ್ಯಕ್ಷರಾಗಿ ಸಚಿನ್ ಕುಮಾರ್ ನೂಜೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷಣ ಎಚ್ ಕಡಿರುದ್ಯಾವರ ಹೊಸಮನೆ, ಕೋಶಾಧಿಕಾರಿಯಾಗಿ ಶ್ರೀಮತಿ ಸುಚಿತ್ರಾ ಲಕ್ಷ್ಮೀಶ್, ಕಾರ್ಯಾಧ್ಯಕ್ಷರಾಗಿ ಭಗೀರಥ ಜಿ. ನೋಟರಿ ವಕೀಲರು ಬೆಳ್ತಂಗಡಿ, ನಾರಾಯಣ ಪೂಜಾರಿ ಬರೆಮೇಲು, ಚಂದ್ರರಾಜ್ ನೂಜೀಲು, ಉಪಾಧ್ಯಕ್ಷರಾಗಿ ಗಿರಿಯಪ್ಪ, ಅವಿನಾಶ್ ಬಳಂಜ, ಶ್ರೀಮತಿ ಮಧುರಾ ರಾಘವ, ಕೃಷ್ಣಪ್ಪ ಪೂಜಾರಿ, ಶ್ರೀಮತಿ ಸುಧಾಮಣಿ ರಮಾನಂದ ಮುಂಡೂರು, ಜಗದೀಶ್, ಶ್ರೀಮತಿ ಗುಣವತಿ, ಪ್ರವೀಣ್ ಬಟ್ಕರಡ್ಡಿ, ಯಶವಂತ ನ್ಯಾಕ್, ಗೋಪಾಲಕೃಷ್ಣ ಧರ್ಮಸ್ಥಳ, ಹರ್ಷ ಹೆಚ್ ಆರ್, ಗುರುವಪ್ಪ ಪೂಜಾರಿ ಉಜಿರೆ, ಕಾರ್ಯದರ್ಶಿಗಳಾಗಿ ಭೋಜ ಪೂಜಾರಿ ಮಜಲು, ಮೋಹನ್ ಬಟ್ಕರಡ್ಡ, ವಿನಯ್ ಗುರಿಪಳ್ಳ, ಶ್ರೀಮತಿ ದೀಪಿಕಾ ಯೋಗೀಶ್ ಕುಲಾಲ್, ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಲಕ್ಷಣ ಎಚ್ ಸಮಿತಿ ರಚನೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿಯವರು ಸಭಿಕರಿಗೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಗುರುವಪ್ಪ ಪೂಜಾರಿ, ನಾರಾಯಣ ಪೂಜಾರಿ ಬರೆಮೇಲು, ಹರೀಶ್ ಗೌಡ, ಗಿರಿಯಪ್ಪ, ಮುತ್ತ ಯಾನೆ ಧರ್ಣಪ್ಪ ಪೂಜಾರಿ, ಲಕ್ಷ್ಮೀಶ ಪಾಲೆತ್ತಾಡಿ, ಪ್ರವೀಣ್ ಬಟ್ಕರಡ್ಕ, ಚಂದ್ರರಾಜ್ ನೂಜೇಲು, ಜಗದೀಶ್, ಶ್ರೀಮತಿ ದೀಪಿಕಾ, ರವೀಂದ್ರ ಗುಂಪೋಲಿ, ಯಶವಂತ ನಾಯ್ಕ, ಕುಂಜರ ಪೂಜಾರಿ ಮಜಲು ಇನ್ನಿತರರು ಉಪಸ್ಥಿತರಿದ್ದರು. ಭೋಜ ಪೂಜಾರಿ ಮಜಲು ಸ್ವಾಗತಿಸಿದರು. ಸಚಿನ್ ಕುಮಾರ್ ನೂಜೋಡಿ ಮಾಹಿತಿ ನೀಡಿದರು. ಶ್ರೀಮತಿ ಸುಧಾಮಣಿ ರಮಾನಂದ ನಿರೂಪಿಸಿ ವಂದಿಸಿದರು.