23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶುಭಾರಂಭ

ಬೆಳ್ತಂಗಡಿ: ಎಸ್.ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಕೇಂದ್ರ ಸ್ಥಳಾಂತರಗೊಂಡು ಪುನರಾರಂಭ

ಬೆಳ್ತಂಗಡಿ: ಬೆಳ್ತಂಗಡಿಯ ಬಸ್ ಸ್ಟ್ಯಾಂಡ್ ಎದುರಿನ ನೂತನ್ ಡ್ರೆಸ್ಸಸ್ ನ ಮೊದಲ ಮಹಡಿಯಲ್ಲಿ ದಯಾನಂದ ನಾಯಕ್ ಮಾಲಕತ್ವದ ಎಸ್. ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಕೇಂದ್ರವು ಮಾ.6 ರಂದು ಪುನರಾರಂಭಗೊಂಡಿದೆ.

ಪುರೋಹಿತರು ಹಾಗೂ ಜ್ಯೋತಿಷಿಗಳಾದ ಪ್ರಭಾಕರ ಭಟ್ ಇಡ್ಯಾ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಕಳೆದ 27 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಈ ಸಂಸ್ಥೆಯು ಇದೀಗ ಸ್ಥಳಾಂತರಗೊಂಡು ಮತ್ತೊಮ್ಮೆ ಯಶಸ್ಸಿನ ದಾರಿಯಲ್ಲಿ ಸಾಗಲಿ ಎಂದು ಶುಭಾಶೀರ್ವಾದ ಮಾಡಿದರು.

ಮುಖ್ಯ ಅತಿಥಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರು ಶುಭವನ್ನು ಹಾರೈಸುತ್ತಾ ಸಹೃದಯತೆ, ಪ್ರೀತಿ, ಸೇವೆ ಮತ್ತು ವಿಶ್ವಾಸ ಬೆಲೆ ಕಟ್ಟಲಾಗದ ಸಂಗತಿಗಳು, ಈ ನಾಲ್ಕು ಸಂಗತಿಗಳನ್ನು ಮುಂದಿಟ್ಟುಕೊಂಡು ಮಾಡಿದ ಸೇವೆ ಜನತಾ ಸೇವೆಯಲ್ಲಿ ಜನಾರ್ಧನನನ್ನು ಕಾಣುವುದು ಸತ್ಯವಾದ ಸಂಗತಿಯಾಗಿದೆ. ಎಸ್ ಎನ್ ಕಂಪ್ಯೂಟರ್ಸ್ ಎಲ್ಲರ ಸೇವೆಗೆ ಅನನ್ಯವಾಗಿ ಲಭ್ಯವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾರದಾ ದಯಾನಂದ್ ನಾಯಕ್, ನಿಧೀಶ್ ನಾಯಕ್, ಸದಾನಂದ ಪ್ರಭು ಹೀರ್ತೊಟ್ಟು, ಸುಧಾಕರ ಪ್ರಭು ಪರ್ಮರೋಡಿ ದಂಪತಿಗಳು, ಸುಧಾಕರ ಪ್ರಭು ಇಡ್ಯಾ, ಕಟ್ಟಡದ ಮಾಲೀಕರಾದ ಶ್ರೀಮತಿ ಸೆಲಿನ್ ನೋರೋನ್ಹ , ಶ್ರೀಮತಿ ನ್ಯಾನ್ಸಿ ಡಿ’ಸೋಜ, ಶ್ರೀಮತಿ ಭಾರತಿ ಜೈನ್, ಅಂಬ್ರೊಸ್ ಡಿ’ಸೋಜ ದಂಪತಿಗಳು, ಬಾಲಕೃಷ್ಣ ಶೆನಾಯ್, ಯಶವಂತ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ, RTC, XEROX, ಕಲರ್ XEROX ಮತ್ತು ಪ್ರಿಂಟ್ ಹಾಗೂ ಎಲ್ಲಾ ತರಹದ ಆನ್ಲೈನ್ ಸೇವೆಗಳು ಲಭ್ಯವಿದೆ ಎಂದು ಮಾಲಕರಾದ ದಯಾನಂದ ನಾಯಕ್ ತಿಳಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

Suddi Udaya

ಕೊಕ್ಕಡ: ಪದ್ಮನಾಭ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸುಲ್ಕೇರಿಯಲ್ಲಿ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿ ಧಾಮ ಸಂಪ್ರೋಕ್ಷಣ ಮಹೋತ್ಸವ

Suddi Udaya

ಉಜಿರೆಯ ಕುಂಜರ್ಪದಲ್ಲಿ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಸೌಜನ್ಯ ಟ್ರೋಫಿ -2024

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya
error: Content is protected !!