ಬೆಳ್ತಂಗಡಿ: ಕುಕ್ಕಿನಡ್ಡ ಮನೆತನದ ಹಿರಿಯರಾದ, ನಿವೃತ್ತ ಡಿಎಫ್ ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಮಾ.6ರಂದು ಬೆಳಿಗ್ಗೆ ವಿಧಿವಶರಾದರು.

ಪದ್ಮನಾಭ ಮಾಣಿಂಜ ರವರ ಪಾರ್ಥೀವ ಶರೀರದ ಅಂತಿಮ ದರ್ಶನ ಮಂಗಳೂರಿನ ಬಲ್ಮಠದ ಇಂದುಪದ್ಮ ನಿವಾಸದಲ್ಲಿ ನಡೆಯಿತು.ತದನಂತರ ಪುಂಜಾಲಕಟ್ಟೆ ಮಾಣಿಂಜದಲ್ಲಿ ಸ್ವಗೃಹದಲ್ಲಿ 4 ಗಂಟೆಯ ತನಕ ಅಂತಿಮ ದರ್ಶನ ನಡೆದು ಅಂತಿಮ ವಿಧಿ ವಿಧಾನಗಳು ನಡೆಯಲಿದೆ.