ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘ ಇದರ 2025-30 ರ ಸಾಲಿನ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆಯು ಇಂದು(ಮಾ.7) ಸಂಘದ ಕಚೇರಿಯಲ್ಲಿ ಜರಗಿತು.
ಅಧ್ಯಕ್ಷರಾಗಿ ಹೆಚ್. ಪ್ರಭಾಕರ ಹುಲಿಮೇರು ಎರಡನೇ ಭಾರೀ ಆಯ್ಕೆಯಾದರೆ ನೂತನ ಉಪಾಧ್ಯಕ್ಷರಾಗಿ ಪ್ರತಾಪ್ ಶೆಟ್ಟಿ ಕುಂಡಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಕೃಷ್ಣ ಶೆಟ್ಟಿ ಉಮನೊಟ್ಟು, ದಿನೇಶ್ ಪೂಜಾರಿ ಹುಲಿಮೇರು, ಉಮೇಶ್ ಶೆಟ್ಟಿ ಪಾಲ್ಯ,ಪೂವಪ್ಪ ಪೂಜಾರಿ ದೇಲೋಡಿ, ವಿಶ್ವನಾಥ ಪೂಜಾರಿ ಕುಂಡಾಜೆ, ಕೇಶವ ಶೆಟ್ಟಿ ನೀರಪಲ್ಕೆ, ಚಂದ್ರಾವತಿ ಮಂಜಿಲ, ಸುಮಿತ್ರ ಶೆಟ್ಟಿ ಹೊಕ್ಕಾಡಿಗೋಳಿ, ಯಶೋಧ ಮಂಜಿಲ, ಹಾಗೂ ಮಾಲತಿ ಪೂಂಜ ಇವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.
ರಿಟರ್ನಿಂಗ್ ಅಧಿಕಾರಿಯಾಗಿ ಪ್ರತಿಮಾ ರವರು ಉಪಸ್ಥಿತರಿದ್ದರು