27.1 C
ಪುತ್ತೂರು, ಬೆಳ್ತಂಗಡಿ
April 27, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಕ್ಸಲರಿಗೆ ಶರಣಾದ ಸರ್ಕಾರ ಅಭಿವೃದ್ಧಿಯ ಕನಸು ಹುಸಿಯಾಗಿಸಿದ ಬಜೆಟ್: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ಮಂಡಿಸಿದ 2025- 26ರ ಸಾಲಿನ ಮುಂಗಡ ಪತ್ರ ನಕ್ಸಲರಿಗೆ ಶರಣಾಗಿ ಶ್ರೀಸಾಮಾನ್ಯರ ಪಾಲಿಗೆ ಸಂಪೂರ್ಣ ನಿರಾಶದಾಯಕವಾಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ನಕ್ಸಲ್ ಚಟುವಟಿಕೆ ಬಗ್ಗೆ ಪೂರ್ಣ ಅರಿವಿದ್ದಂತೆ ಕೇವಲ ಆರು ಜನರ ನಕ್ಸಲರ ಶರಣಗಾತಿಯಿಂದ ನಕ್ಸಲ್ ನಿಗ್ರಹ ಪಡೆಯನ್ನೇ ವಿಸರ್ಜಿಸಿ 10 ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದನ್ನು ಗಮನಿಸಿದರೆ ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದರೋ ಅಥವಾ ಸರ್ಕಾರವೇ ನಕ್ಸಲರಿಗೆ ಶರಣಾಯಿತೋ ಎಂಬಂತಿದೆ.

ಯೋಜನಾಬದ್ಧವಲ್ಲದ ಯೋಚನೆಗಳಿಂದ ಕರ್ನಾಟಕ ರಾಜ್ಯದ ವಿತ್ತೀಯ ಶಿಸ್ತು ಹಳಿತಪ್ಪಿ ಮೂಲ ಸೌಕರ್ಯಗಳ ಅಭಿವೃದ್ಧಿ ಕುಂಠಿತದೊಂದಿಗೆ ರಾಜ್ಯದ ಜನತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಕಳೆದ ಸಾಲಿನ ಮುಂಗಡ ಪತ್ರದಲ್ಲಿ ವಿವಿಧ ಇಲಾಖೆಗಳಿಗೆ ಘೋಷಿಸಿದ ಅನುದಾನ ಅನುಷ್ಠಾನವಾಗದೆ ದುರುಪಯೋಗವಾಗಿದ್ದು ಈ ಬಾರಿಯೂ ಮುಖ್ಯಮಂತ್ರಿಗಳ ಬಜೆಟ್ ಭಾಷಣದಲ್ಲಿ ಎಂದಿನಂತೆ ಅಲ್ಪ ಸಂಖ್ಯಾತರ ತುಷ್ಟೀಕರಣ, ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಇಂಧನ ಕೃಷಿ ಇಲಾಖೆಗಳ ಕಡೆಗಣನೆ ಎದ್ದು ಕಾಣುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿರುವುದರ ಬಗ್ಗೆ ತೀವ್ರವಾದ ಕಳವಳವನ್ನು ಶಾಸಕ ಹರೀಶ್ ಪೂಂಜ ಪ್ರಕಟಣೆ ಮೂಲಕ ವ್ಯಕ್ತಪಡಿಸಿದ್ದಾರೆ.

Related posts

ಮರೋಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಹಾಗೂ ಮಹಿಳಾ ದಿನಾಚರಣೆ

Suddi Udaya

ಶಿಬಾಜೆಯ ಮಾದರಿಯಲ್ಲಿ ಮರಣ ಮೃದಂಗಕ್ಕೆ ಅಣಿಯಾಗಿ ನಿಂತಿರುವ ಬೆಳ್ತಂಗಡಿ ಸಂತೆಕಟ್ಟೆ ವಿದ್ಯುತ್ ಕಂಬದ ಸ್ಟೇ ವಯ‌ರ್

Suddi Udaya

ಕಳೆಂಜ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಲ್ಲೇರಿಯಲ್ಲಿ ಸಂಘದ ಎರಡನೇ ಶಾಖೆ ಲೋಕಾರ್ಪಣೆ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ : ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ: ಇನ್ನು ಕೆಲವೇ ದಿನಗಳು

Suddi Udaya
error: Content is protected !!